ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಯೂನಿರ್ವಸಿಟಿ ಗೇಮ್ಸ್‌: ಭಾರತಕ್ಕೆ ದಾಖಲೆಯ 26 ಪದಕ

Published 8 ಆಗಸ್ಟ್ 2023, 16:20 IST
Last Updated 8 ಆಗಸ್ಟ್ 2023, 16:20 IST
ಅಕ್ಷರ ಗಾತ್ರ

ಚೆಂಗ್ಡು (ಚೀನಾ): ಭಾರತದ ಅಥ್ಲೀಟ್‌ಗಳು ಇಲ್ಲಿ ನಡೆದ ವಿಶ್ವ ಯೂನಿರ್ವಸಿಟಿ ಗೇಮ್ಸ್‌ನಲ್ಲಿ ದಾಖಲೆಯ 26 ಪದಕಗಳೊಂದಿಗೆ ಅಭಿಯಾನವನ್ನು ಕೊನೆಗೊಳಿಸಿದರು.

ಭಾರತ 11 ಚಿನ್ನ, 5 ಬೆಳ್ಳಿ ಮತ್ತು 10 ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 7ನೇ ಸ್ಥಾನ ಗಳಿಸಿತು. ಇದು ಈ ಕ್ರೀಡೆಗಳಲ್ಲಿ ಇದುವರೆಗೆ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ.

ಭಾರತವು ಈ ಹಿಂದಿನ ಒಟ್ಟು ವಿಶ್ವ ಯೂನಿರ್ವಸಿಟಿ ಗೇಮ್ಸ್‌ಗಳಲ್ಲಿ 6 ಚಿನ್ನ, 6 ಬೆಳ್ಳಿ ಮತ್ತು 9 ಕಂಚಿನೊಂದಿಗೆ 21 ಪದಕಗಳನ್ನು ಗೆದ್ದಿತ್ತು.

ಗೇಮ್ಸ್‌ನಲ್ಲಿ ಭಾರತದ 256 ಅಥ್ಲೀಟ್‌ಗಳು ಭಾಗವಹಿಸಿದ್ದರು. ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾರತದ ಅಥ್ಲೀಟ್‌ಗಳ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಇಲ್ಲಿ 82 ಮಂದಿ ಪಾಲ್ಗೊಂಡು, ಕೇವಲ ನಾಲ್ಕು ಕಂಚಿನ ಪದಕ ಗೆದ್ದಿದ್ದರು. 

21 ಸದಸ್ಯರ ಶೂಟಿಂಗ್ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ 8 ಚಿನ್ನ, 4 ಬೆಳ್ಳಿ ಮತ್ತು 2 ಕಂಚು ಗೆದ್ದರೆ, ಆರ್ಚರಿಯಲ್ಲಿ 3 ಚಿನ್ನ, 1 ಬೆಳ್ಳಿ ಮತ್ತು 3 ಕಂಚು ಗೆದ್ದಿದೆ.

ಆತಿಥೇಯ ಚೀನಾ 178 ಪದಕಗಳೊಂದಿಗೆ (103 ಚಿನ್ನ, 40 ಬೆಳ್ಳಿ, 35 ಕಂಚು) ಅಗ್ರಸ್ಥಾನ ಪಡೆಯಿತು. ಜಪಾನ್ (21 ಚಿನ್ನ, 29 ಬೆಳ್ಳಿ, 43 ಕಂಚು) ಮತ್ತು ಕೊರಿಯಾ (17 ಚಿನ್ನ, 18 ಬೆಳ್ಳಿ, 23 ಕಂಚು) ನಂತರದ ಸ್ಥಾನ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT