ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತ ತಂಡಗಳಿಗೆ ಸೋಲು

Published 10 ಜೂನ್ 2024, 4:08 IST
Last Updated 10 ಜೂನ್ 2024, 4:08 IST
ಅಕ್ಷರ ಗಾತ್ರ

ಲಂಡನ್‌: ಅನುಭವಿ ಗೋಲುಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರ ಅಮೋಘ ಪ್ರದರ್ಶನ ಹೊರತಾಗಿಯೂ ಭಾರತ ಪುರುಷರ ತಂಡವು ಎಫ್‌ಐಎಚ್‌ ಪ್ರೊ ಹಾಕಿ ಲೀಗ್‌ನಲ್ಲಿ ಭಾನುವಾರ ಬ್ರಿಟನ್‌ ವಿರುದ್ಧ 2–3ರಿಂದ ಪರಾಭವಗೊಂಡಿತು.

ಭಾರತ ತಂಡದ ಪರ ಸುಖ್‌ಜೀತ್‌ ಸಿಂಗ್‌ (19ನೇ ನಿಮಿಷ) ಮತ್ತು ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ (36ನೇ ನಿ) ಗೋಲು ಗಳಿಸಿದರು. ಆತಿಥೇಯ ತಂಡದ ಪರವಾಗಿ ರೋಪರ್ ಫಿಲ್ (1ನೇ ನಿ), ವಾಲರ್ ಜ್ಯಾಕ್ (37ನೇ ನಿ) ಮತ್ತು ಫಾರ್ಸಿತ್ ಆಲನ್ (50ನೇ ನಿ) ಗೋಲು ಗಳಿಸಿದರು. ಶ್ರೀಜೇಶ್‌ ಅವರು ಎದುರಾಳಿ ತಂಡದ ಪೆನಾಲ್ಟಿ ಅವಕಾಶಗಳಿಗೆ ತಡೆಯೊಡ್ಡಿ ಗಮನ ಸೆಳೆದರು.

16 ಪಂದ್ಯಗಳನ್ನು ಆಡಿರುವ ಭಾರತ ತಂಡವು 5ರಲ್ಲಿ ಗೆಲುವು ಸಾಧಿಸಿ 24 ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಮಹಿಳಾ ತಂಡಕ್ಕೂ ಸೋಲು: ಭಾರತ ಮಹಿಳಾ ತಂಡವೂ ಬ್ರಿಟನ್‌ ವಿರುದ್ಧದ ಪಂದ್ಯದಲ್ಲಿ 2–3ರಿಂದ ಸೋಲನ್ನು ಕಂಡಿತು. ಈ ಮೂಲಕ ಸತತ ಎಂಟು ಪಂದ್ಯಗಳ ಸೋಲಿನೊಂದಿಗೆ ಪ್ರೊ ಋತುವನ್ನು ಕೊನೆಗೊಳಿಸಿತು.

ಭಾರತದ ಪರ ಲಾಲ್ರೆಮ್ಸಿಯಾಮಿ (14ನೇ ನಿ) ಮತ್ತು ಕೌರ್ ನವನೀತ್ (23ನೇ ನಿ) ಗೋಲು ಗಳಿಸಿದರೆ, ಬ್ರಿಟನ್‌ ಪರ ವ್ಯಾಟ್ಸನ್ ಶಾರ್ಲೆಟ್ (3ನೇ ನಿ) ಮತ್ತು ಬಾಲ್ಡನ್ ಗ್ರೇಸ್ (56 ಮತ್ತು 58ನೇ ನಿ) ಚೆಂಡನ್ನು ಗುರಿ ಸೇರಿಸಿದರು.

16 ಪಂದ್ಯಗಳನ್ನು ಆಡಿರುವ ಭಾರತ ತಂಡವು ಎರಡರಲ್ಲಿ ಮಾತ್ರ ಗೆದ್ದು 8 ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT