ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಯಿಸಿಲ್ ಅಂತರರಾಷ್ಟ್ರೀಯ ಓಪನ್ ಚೆಸ್: ಇನಿಯನ್‌ಗೆ ಪ್ರಶಸ್ತಿ

Last Updated 29 ಆಗಸ್ಟ್ 2021, 14:26 IST
ಅಕ್ಷರ ಗಾತ್ರ

ನೊಯಿಸಿಲ್‌, ಫ್ರಾನ್ಸ್: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪಿ.ಇನಿಯನ್ ಅವರು ನೊಯಿಸಿಲ್ ಅಂತರರಾಷ್ಟ್ರೀಯ ಓಪನ್ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಕ್ಲಾಸಿಕಲ್ ವಿಭಾಗದಲ್ಲಿ ಅವರು ಒಂಬತ್ತು ಸುತ್ತುಗಳಲ್ಲಿ ಎಂಟು ಪಾಯಿಂಟ್ಸ್ ಕಲೆಹಾಕಿದರು. ಇನಿಯನ್‌ ಬ್ಲಿಟ್ಜ್‌ ವಿಭಾಗದಲ್ಲೂ ಮೊದಲ ಸ್ಥಾನ ಗಳಿಸಿದ್ದರು.

ಇನಿಯನ್‌ (ಇಎಲ್‌ಒ ರೇಟಿಂಗ್‌ 2506) ಅವರು ಎರಡನೇ ಸ್ಥಾನ ಗಳಿಸಿದ ಉಕ್ರೇನ್‌ನ ಯೂರಿ ಸೊಲೊದೊವಿಚೆಂಕೊ (7.5) ಅವರಿಗಿಂತ ಅರ್ಧ ಪಾಯಿಂಟ್ಸ್ ಹೆಚ್ಚಿಗೆ ಗಳಿಸಿದರು. ಫ್ರಾನ್ಸ್‌ನ ಕಂಬ್ರತ್‌ ಯಾನಿಕ್‌ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಒಂಬತ್ತರ ಪೈಕಿ ಭಾರತದ ಆಟಗಾರ ಏಳು ಗೇಮ್‌ಗಳಲ್ಲಿ ಜಯ ಸಾಧಿಸಿದರು. ಎರಡು ಡ್ರಾ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT