ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಎ: ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ?

Last Updated 12 ಸೆಪ್ಟೆಂಬರ್ 2018, 15:49 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ (ಕೆಎಎ) ಚುನಾವಣೆ ಇದೇ 19ರಂದು ನಡೆಯಲಿದ್ದು ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ. ಒಟ್ಟು 11 ಸ್ಥಾನಗಳಿಗೆ ಸ್ಪರ್ಧಿಸಿದ್ದ 13 ಮಂದಿ ಪೈಕಿ ಇಬ್ಬರ ನಾಮಪತ್ರಗಳು ತಿರಸ್ಕಾರಗೊಂಡಿವೆ.

ನಾಮಪತ್ರಗಳ ಸೂಕ್ಷ್ಮ ಪರಿಶೀಲನೆ ಮಂಗಳವಾರ ನಡೆದಿತ್ತು. ಕಾರ್ಯದರ್ಶಿ ಸ್ಥಾನಕ್ಕೆ ಹಾಲಿ ಕಾರ್ಯದರ್ಶಿ ರಾಜವೇಲು ಮತ್ತು ಸಿ.ಜಿ.ಮಂಜುನಾಥ ಆಕಾಂಕ್ಷಿಗಳಾಗಿದ್ದರು. ಮಂಜುನಾಥ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಖಜಾಂಚಿ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದ ಸುನಿಲ್ ಕುಮಾರ್ ಶೆಟ್ಟಿ ಮತ್ತು ಉದಯ ಕುಮಾರ್‌ ಅವರ ಪೈಕಿ ಉದಯಕುಮಾರ್‌ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಬುಧವಾರ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ ಆಗಿತ್ತು. ಯಾರೂ ನಾಮಪತ್ರ ಹಿಂಪಡೆದಿರಲಿಲ್ಲ.

ಕಣದಲ್ಲಿ ಉಳಿದಿರುವವರು: ಅಧ್ಯಕ್ಷ ಸ್ಥಾನ: ಮುತ್ತಪ್ಪ ರೈ (ರಾಮನಗರ ಜಿಲ್ಲಾ ಸಂಸ್ಥೆ), ಹಿರಿಯ ಉಪಾಧ್ಯಕ್ಷರು: ಎಚ್‌.ಡಿ.ಮಹದೇವ (ಹಾಸನ), ಉಪಾಧ್ಯಕ್ಷರು: ಜಿ.ಸೋಮಶೇಖರ, ಎಸ್‌.ಎಸ್‌.ಹಿರೇಮಠ (ವಿಜಯಪುರ), ಬಿ.ಎಲ್‌.ಭಾರತಿ (ತುಮಕೂರು), ಸದಾನಂದ ನಾಯಕ್‌ (ಕಾರವಾರ), ಕಾರ್ಯದರ್ಶಿ: ರಾಜವೇಲು (ಚಿಕ್ಕಮಗಳೂರು), ಖಜಾಂಚಿ: ಸುನಿಲ್ ಕುಮರ್ ಶೆಟ್ಟಿ (ದಕ್ಷಿಣ ಕನ್ನಡ), ಹಿರಿಯ ಜಂಟಿ ಕಾರ್ಯದರ್ಶಿ: ಅಜಯ್‌ ಕುಮಾರ್‌ (ಚಿಕ್ಕಮಗಳೂರು), ಜಂಟಿ ಕಾರ್ಯದರ್ಶಿ: ಆರ್‌.ಎಸ್‌.ಕಲ್ಲೇಶ್‌ (ಚಿತ್ರದುರ್ಗ), ಪ್ರಭಾಕರ್‌ (ತುಮಕೂರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT