ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಾ ದಾಖಲೆ, ಉನ್ನತಿಗೆ ಚಿನ್ನ

Published 13 ಮೇ 2024, 18:19 IST
Last Updated 13 ಮೇ 2024, 18:19 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಅಭಾ ಖತುವಾ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಫೆಡರೇಷನ್ ಕಪ್ ಅಥ್ಲೆಟಿಕ್ಸ್‌ನ ಶಾಟ್‌ಪಟ್‌ ಥ್ರೋ ಸ್ಪರ್ಧೆಯಲ್ಲಿ 18.41 ಮೀಟರ್‌ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

ಮಹಾರಾಷ್ಟ್ರವನ್ನು ಪ್ರತಿನಿಧಿಸುತ್ತಿರುವ ಅಭಾ ಅವರು, ಮನ್‌ಪ್ರೀತ್ ಕೌರ್ (18.06 ಮೀ) ಅವರೊಂದಿಗೆ ಈ ಹಿಂದೆ ಜಂಟಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದರು. ಈಗ ಆ ದಾಖಲೆಯನ್ನು ತಮ್ಮದೇ ಹೆಸರಿಗೆ ಬರೆದುಕೊಂಡಿದ್ದಾರೆ.

ಅಭಾ ಅವರಿಗೆ ಇಲ್ಲಿ ಒಲಿಂಪಿಕ್ಸ್ ಅರ್ಹತಾ ಮಟ್ಟ (18.80 ಮೀ) ತಲುಪಲು ಸಾಧ್ಯವಾಗಲಿಲ್ಲ. ಜೂನ್ 30ರಂದು ಕ್ವಾಲಿಫೈಯರ್‌ ವಿಂಡೋ ಮುಕ್ತಾಯಗೊಳ್ಳಲಿದೆ. 

ಉನ್ನತಿಗೆ ಚಿನ್ನ: ಕರ್ನಟಕದ ಉನ್ನತಿ ಅಯ್ಯಪ್ಪ ಅವರು ಮಹಿಳೆಯರ 200 ಮೀಟರ್‌ ಓಟದ ಫೈನಲ್‌ನಲ್ಲಿ 23.85 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು. ಸರಸ್ವತು ಸಹಾ (22.82ಸೆ) ಅವರ ರಾಷ್ಟ್ರೀಯ ದಾಖಲೆಯನ್ನು ಮುರಿಯವ ಅವಕಾಶವನ್ನು ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT