ನವದೆಹಲಿ: ಒಂಬತ್ತು ಸ್ಥಾನಗಳ ಏರಿಕೆ ಕಂಡಿರುವ ಭಾರತದ ಯುವ ಟೇಬಲ್ ಟೆನಿಸ್ ಆಟಗಾರ ಮಾನವ್ ಠಕ್ಕರ್, 21 ವರ್ಷದೊಳಗಿನವರ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ ಗುರುವಾರ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್ ಪಟ್ಟಿಯ ಸೀನಿಯರ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸತ್ಯನ್ 30ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅಚಂತಾ ಶರತ್ ಕಮಲ್ ಒಂದು ಸ್ಥಾನದ ಏರಿಕೆಯೊಂದಿಗೆ 33ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಮಣಿಕಾ ಭಾತ್ರ ಸ್ಥಿರತೆ ಕಾಯ್ದುಕೊಂಡು 61ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

19 ವರ್ಷದ ಮಾನವ್ ಡಿಸೆಂಬರ್‌ನಲ್ಲಿ ಕೆನಡಾದಲ್ಲಿ ನಡೆದಿದ್ದ ಐಟಿಟಿಎಫ್ ಚಾಲೆಂಜ್ ಪ್ಲಸ್ ಬೆನೆಮ್ಯಾಕ್ಸ್ ವರ್ಗೊ 21 ವರ್ಷದೊಳಗಿನವರ ನಾರ್ತ್ ಅಮೆರಿಕನ್ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು. ಇದು ಅವರ ನಂಬರ್ ಒನ್ ಹಾದಿಯನ್ನು ಸುಗಮಗೊಳಿಸಿತ್ತು.

ಟೂರ್ನಿಯಲ್ಲಿ ಅವರು ಅರ್ಜೆಂಟೀನಾದ ಮಾರ್ಟಿನ್ ಬೆಂಟಾಂಕರ್ ವಿರುದ್ಧ 11–3, 11–5, 11–6ರ ಗೆಲುವು ಸಾಧಿಸಿದ್ದರು.

ದೇಶದ ನಾಲ್ಕನೇ ಆಟಗಾರ: ಮಾನವ್ ಠಕ್ಕರ್21 ವರ್ಷದೊಳಗಿನವರ ಐಟಿಟಿಎಫ್ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದ ದೇಶದ ನಾಲ್ಕನೇ ಆಟಗಾರ ಎನಿಸಿಕೊಂಡರು. ಈ ಹಿಂದೆ ಹರ್ಮೀತ್ ದೇಸಾಯಿ, ಜಿ.ಸತ್ಯನ್ ಮತ್ತು ಸೌಮ್ಯಜೀತ್ ಘೋಷ್ ಅಗ್ರ ಪಟ್ಟ ಗಳಿಸಿದ್ದರು. 2018ರ ಫೆಬ್ರುವರಿಯಲ್ಲಿ 18 ವರ್ಷದೊಳಗಿನವರ ವಿಭಾಗದ ರ‍್ಯಾಂಕಿಂಗ್‌ನಲ್ಲೂ ಮಾನವ್ ಒಂದನೇ ಸ್ಥಾನಕ್ಕೇರಿದ್ದರು.

ಜಕಾರ್ತದಲ್ಲಿ 2018ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿ ಮಾನವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.