ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ಮುಧೋಳದ ನಿಂಗಪ್ಪಗೆ ಚಿನ್ನದ ಪದಕ

Last Updated 24 ಜೂನ್ 2022, 18:00 IST
ಅಕ್ಷರ ಗಾತ್ರ

ಮುಧೋಳ: ಇಲ್ಲಿಯ ನಿಂಗಪ್ಪ ಗೆಣೆನ್ನವರ ಕಿರ್ಗಿಸ್ತಾನದಲ್ಲಿ ನಡೆದ 17 ವರ್ಷದೊಳಗಿನವರ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಬುಧವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ 45 ಕೆ.ಜಿ. ಒಳಗಿನವರ ಫ್ರೀಸ್ಟೈಲ್‌ ವಿಭಾಗದಲ್ಲಿ ಅವರು ಪ್ರಥಮ ಸ್ಥಾನ ಗಳಿಸಿ ಗೆದ್ದರು.

ಪ್ರಶಸ್ತಿ ಸುತ್ತಿನ ಬೌಟ್‌ನಲ್ಲಿ ನಿಂಗಪ್ಪ 10–7ರಿಂದ ಇರಾನ್‌ ದೇಶದ ಅಮೀರ್ ಮೊಹಮ್ಮದ್ ಸಲೆಹ ವಿರುದ್ಧ ಜಯಿಸಿದರು.

ಮುಧೋಳದ ಜೈ ಹನುಮಾನ್ ವ್ಯಾಯಾಮ ಶಾಲೆಯ ಕುಸ್ತಿ ತರಬೇತುದಾರ ಪೈಲ್ವಾನ್‌ ಅರುಣ ಕುಮಕಾಳೆ ಅವರ ಬಳಿ 10ನೇ ವಯಸ್ಸಿನಿಂದ ತರಬೇತಿ ಪಡೆದಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಹಲವು ಟೂರ್ನಿಗಳಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಸದ್ಯ ಅವರು 10ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT