ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌: ನೇಹಾ ತ್ರಿಪಾಠಿಗೆ ಪ್ರಶಸ್ತಿ

Published 15 ಸೆಪ್ಟೆಂಬರ್ 2023, 15:43 IST
Last Updated 15 ಸೆಪ್ಟೆಂಬರ್ 2023, 15:43 IST
ಅಕ್ಷರ ಗಾತ್ರ

ಗುರುಗ್ರಾಮ (ಪಿಟಿಐ): ನೇಹಾ ತ್ರಿಪಾಠಿ ಅವರು ಹೀರೊ ಮಹಿಳಾ ಪ್ರೊಫೆಷನಲ್‌ ಗಾಲ್ಫ್‌ ಟೂರ್‌ನ (ಡಬ್ಲ್ಯುಪಿಜಿಟಿ) 12ನೇ ಲೆಗ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಇಲ್ಲಿನ ಗೋಲ್ಡನ್‌ ಗ್ರೀನ್ಸ್‌ ಗಾಲ್ಫ್‌ ಅಂಡ್‌ ರೆಸಾರ್ಟ್ಸ್‌ ಲಿಮಿಟೆಡ್‌ ಕೋರ್ಸ್‌ನಲ್ಲಿ ನಡೆದ ಟೂರ್ನಿಯ ಮೂರು ಸುತ್ತುಗಳನ್ನು ಅವರು ಒಟ್ಟು 208 ( 8 ಅಂಡರ್‌) ಅವಕಾಶಗಳಲ್ಲಿ ಪೂರ್ಣಗೊಳಿಸಿದರು. ಶುಕ್ರವಾರ ನಡೆದ ಕೊನೆಯ ಸುತ್ತಿನಲ್ಲಿ ಅವರು 73 ಸ್ಟ್ರೋಕ್‌ಗಳನ್ನು ಬಳಸಿಕೊಂಡರು. ಮೊದಲ ಎರಡು ಸುತ್ತುಗಳಲ್ಲಿ ಕ್ರಮವಾಗಿ 68, 67 ಸ್ಕೋರ್‌ ಮಾಡಿದ್ದರು.

ನೇಹಾ ಅವರಿಗೆ ಪ್ರಬಲ ಪೈಪೋಟಿ ನೀಡಿದ ತ್ವೇಸಾ ಮಲಿಕ್ (211) ಎರಡನೇ ಸ್ಥಾನ ಪಡೆದರು. ಮೊದಲ ಎರಡು ಸುತ್ತುಗಳನ್ನು ಕೊನೆಗೊಳಿಸಲು (75–70) ಅಧಿಕ ಸ್ಟ್ರೋಕ್‌ಗಳನ್ನು ಬಳಸಿದ್ದು ಅವರಿಗೆ ಮುಳುವಾಗಿ ಪರಿಣಮಿಸಿತು. ರಿಧಿಮಾ ದಿಲಾವರಿ ಮತ್ತು ರಿಯಾ ಯಾದವ್ (ತಲಾ 212) ಅವರು ಜಂಟಿ ಮೂರನೇ ಸ್ಥಾನ ಪಡೆದರು.

ನೇಹಾ, ಈ ಋತುವಿನ ಡಬ್ಲ್ಯುಪಿಜಿಟಿನಲ್ಲಿ ತಾವು ಪಾಲ್ಗೊಂಡ ಮೂರು ಟೂರ್ನಿಗಳಲ್ಲಿ ಎರಡನ್ನು ಗೆದ್ದುಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು 10ನೇ ಲೆಗ್‌ನಲ್ಲಿ ಚಾಂಪಿಯನ್‌ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT