ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾರ್ವೆ ಚೆಸ್‌: ವೈಶಾಲಿಗೆ ಜಯ, ಪ್ರಜ್ಞಾನಂದಗೆ ಸೋಲು

Published 31 ಮೇ 2024, 16:59 IST
Last Updated 31 ಮೇ 2024, 16:59 IST
ಅಕ್ಷರ ಗಾತ್ರ

ಸ್ಟೆವೆಂಜರ್, ನಾರ್ವೆ: ಭಾರತದ ಗ್ರ್ಯಾಂಡ್ ಮಾಸ್ಟರ್‌ ಆರ್.ಪ್ರಜ್ಞಾನಂದ ಅವರು ಇಲ್ಲಿ ನಡೆಯುತ್ತಿರುವ ನಾರ್ವೆ ಚೆಸ್‌ ಟೂರ್ನಿಯಲ್ಲಿ ಅಮೆರಿಕದ ಹಿಕಾರು ನಕಾಮುರಾ ವಿರುದ್ಧ ಸೋಲುನುಭವಿಸಿದರು. ಆದರೆ, ಅವರ ಅಕ್ಕ ಆರ್. ವೈಶಾಲಿ ಅವರು ಸ್ವೀಡನ್‌ನ ಪಿಯಾ ಕ್ರಾಮ್ಲಿಂಗ್ ವಿರುದ್ಧ ಜಯ ಸಾಧಿಸಿದ್ದಾರೆ. 

ಕ್ಲಾಸಿಕಲ್ ಮಾದರಿ ಚೆಸ್‌ನಲ್ಲಿ ಎರಡನೇ ಗೆಲುವಿನ ನಂತರ ವೈಶಾಲಿ ತನ್ನ ಮುನ್ನಡೆಯನ್ನು 2.5 ಅಂಕಗಳಿಗೆ ವಿಸ್ತರಿಸಿದರು. ಭಾರತದ ಆಟಗಾರ್ತಿ ಈಗ 8.5 ಅಂಕ ಹೊಂದಿದ್ದು, ಮಹಿಳಾ ವಿಶ್ವ ಚಾಂಪಿಯನ್ ಚೀನಾದ ವೆಂಜುನ್ ಜು ಮತ್ತು ಉಕ್ರೇನ್‌ನ ಅನ್ನಾ ಮುಜಿಚುಕ್ ನಂತರದ ಸ್ಥಾನದಲ್ಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಮುಜಿಚುಕ್ ಅವರು ಭಾರತದ ಕೊನೇರು ಹಂಪಿ ಅವರನ್ನು ಮಣಿಸುವ ಮೂಲಕ ಮೊದಲ ಗೆಲುವು ದಾಖಲಿಸಿದರು. ನಿರ್ಣಾಯಕ ಪಂದ್ಯದಲ್ಲಿ ವೆನ್ಜುನ್ ಅವರು ಸ್ವದೇಶದ ಟಿಂಗ್ಜಿ ಲೀ ವಿರುದ್ಧ ಜಯ ಗಳಿಸಿದರು.

ಆರು ಆಟಗಾರರ ಡಬಲ್ ರೌಂಡ್-ರಾಬಿನ್ ಟೂರ್ನಿಯಲ್ಲಿ ಇನ್ನೂ ಆರು ಸುತ್ತುಗಳು ಬಾಕಿ ಉಳಿದಿದ್ದು, ಲೀ ಐದು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. 

ಪುರುಷರ ವಿಭಾಗದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾಲರ್ಸನ್‌ ಸಾಂಪ್ರದಾಯಿಕ ಎದುರಾಳಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಫಿರೌಜಾ ಅಲಿರೇಜಾ ಅವರು ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೇನ್ ಅವರನ್ನು ಸೋಲಿಸಿದರು. 

ಟೂರ್ನಿಯಲ್ಲಿ ಇನ್ನೂ ಅನೇಕ ಪಂದ್ಯಗಳು ನಡೆಯಬೇಕಿದೆ. ಆದರೆ, ನಾಲ್ಕನೇ ಸುತ್ತಿನ ಕೊನೆಯಲ್ಲಿ ನಕಾಮುರಾ ಏಳು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 

ಕಾರ್ಲಸನ್‌ ಆರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಪ್ರಜ್ಞಾನಂದ 5.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಹಂತದಲ್ಲಿ ಕರುವಾನಾ ಐದು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ಲಿರೇನ್ ಕೇವಲ 2.5 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT