ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಲಿಂಪಿಕ್ಸ್‌: ಬಾಕ್ಸಿಂಗ್ ಸ್ವರ್ಣ ಗೆದ್ದವರಿಗೆ ನಗದು ಬಹುಮಾನ ಘೋಷಿಸಿದ ಐಬಿಎ

Published 29 ಮೇ 2024, 15:30 IST
Last Updated 29 ಮೇ 2024, 15:30 IST
ಅಕ್ಷರ ಗಾತ್ರ

ಜಿನೇವಾ: ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ಚಿನ್ನ ಗೆಲ್ಲುವ ಪ್ರತಿಯೊಬ್ಬ ಬಾಕ್ಸಿಂಗ್ ಪಟುವಿಗೆ ₹41.68 ಲಕ್ಷ ($50,000) ನಗದು ಬಹುಮಾನ ನೀಡುವುದಾಗಿ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಐಬಿಎ) ಪ್ರಕಟಿಸಿದೆ. ವಿಶೇಷ ಎಂದರೆ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು ಬಾಕ್ಸಿಂಗ್ ಸಂಸ್ಥೆಯನ್ನು ನಿರ್ಬಂಧಿಸಿದೆ.

ನಗದು ಬಹುಮಾನದ ಭರವಸೆಯು, ಒಲಿಂಪಿಕ್ ಸಂಸ್ಥೆಯ ಜೊತೆ ಇನ್ನಷ್ಟು ಸಂಘರ್ಷಕ್ಕೆ ದಾರಿಮಾಡಿಕೊಡಲಿದೆ. ಒಟ್ಟು 13 ತೂಕ ವಿಭಾಗಗಳಲ್ಲಿ ಎಂಟರ ಘಟ್ಟ ತಲುಪುವ ಬಾಕ್ಸರ್‌ಗಳಿಗೆ ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ಸುಮಾರು ₹8.33 ಲಕ್ಷ ನೀಡುವುದಾಗಿಯೂ ಐಬಿಎ ಪ್ರಕಟಿಸಿದೆ. ಅವರ ಕೋಚ್‌ಗಳು, ರಾಷ್ಟ್ರೀಯ ತಂಡಗಳಿಗೂ ಬಹುಮಾನ ಘೋಷಿಸಿದೆ.

ಕೋಚ್‌, ರಾಷ್ಟ್ರೀಯ ತಂಡಗಳಿಗೆ ₹10 ಲಕ್ಷ ನೀಡುವುದಾಗಿಯೂ ಪ್ರಕಟಿಸಿದೆ.

ಕ್ರೀಡಾ ಸಂಸ್ಥೆಗಳು ನೀಡುವ ಬಹುಮಾನ ಹಣಕ್ಕೂ ಐಒಸಿ ಸಮ್ಮತಿ ನೀಡಿಲ್ಲ. ಈ ಹಿಂದೆ ಏಪ್ರಿಲ್‌ನಲ್ಲಿ, ವಿಶ್ವ ಅಥ್ಲೆಟಿಕ್ಸ್‌ ಪ್ಯಾರಿಸ್‌ ಕ್ರೀಡೆಗಳಲ್ಲಿ ಚಿನ್ನ ಗೆಲ್ಲುವ 48 ಅಥ್ಲೀಟುಗಳಿಗೆ ತಲಾ ₹41 ಲಕ್ಷ ನೀಡುವುದಾಗಿ ಪ್ರಕಟಿಸಿತ್ತು.

ಬಹುಮಾನ ಹಣದ ಮೂಲ ಸ್ಪಷ್ಟವಾಗಿಲ್ಲ. ಆದರೆ ಐಬಿಎದ ರಷ್ಯಾ ಅಧ್ಯಕ್ಷ ಉಮರ್‌ ಕ್ರೆಮ್ಲೆವ್‌ ಅವರಿಗೆ ದೇಶದ ಅತಿ ದೊಡ್ಡ ಇಂಧನ ಸಂಸ್ಥೆ ಗ್ಯಾಝ್‌ಪ್ರೊಮ್‌ ಬೆಂಬಲವಿದೆ. 2023ರ ವಿಶ್ವ ಚಾಂಪಿಯನ್‌ಷಿಪ್‌ನ ಚಿನ್ನದ ಪದಕ ಗೆದ್ದವರಿಗೆ ₹.166 ಕೋಟಿ ಬಹುಮಾನ ನೀಡುವುದಾಗಿ ಐಬಿಎ ಈ ಮೊದಲೇ ಘೋಷಿಸಿದೆ. ಮುಂದೆ ಅದನ್ನು ಹೆಚ್ಚಿಸುವುದಾಗಿಯೂ ಹೇಳಿದೆ. ಲಾಸ್‌ ಏಂಜಲಿಸ್‌ನಲ್ಲಿ (2028) ಬೆಳ್ಳಿ, ಕಂಚಿನ ಪದಕ ಗೆದ್ದವರಿಗೂ ಇನಾಮು ನೀಡುವುದಾಗಿ ತಿಳಿಸಿತ್ತು.

ಹಣಕಾಸು ವಿಷಯದಲ್ಲಿ ಪಾರದರ್ಶಕತೆ ಕಾಪಾಡದ ಕಾರಣಕ್ಕೆ ಐಒಸಿ, ಬಾಕ್ಸಿಂಗ್ ಸಂಸ್ಥೆಯನ್ನು ನಿರ್ಬಂಧಿಸಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ ಬಾಕ್ಸಿಂಗ್ ಸ್ಪರ್ಧೆಗಳನ್ನೂ, ಐಬಿಎ ನೆರವಿಲ್ಲದೇ ಐಒಸಿಯೇ ಸಂಘಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT