ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಸಮಾರಂಭಕ್ಕೆ ಸೀನ್‌ ಸಂಭಾವ್ಯ ಆಯ್ಕೆ

Published 16 ಏಪ್ರಿಲ್ 2024, 15:45 IST
Last Updated 16 ಏಪ್ರಿಲ್ 2024, 15:45 IST
ಅಕ್ಷರ ಗಾತ್ರ

ಪ್ಯಾರಿಸ್: ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವನ್ನು ರಾಷ್ಟ್ರೀಯ ಕ್ರೀಡಾಂಗಣಕ್ಕೆ ಸ್ಥಳಾಂತರಿಸುವ ಸಾಧ್ಯತೆ ಎಂದು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಹೇಳಿಕೆ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಪ್ಯಾರಿಸ್ ಒಲಿಂಪಿಕ್ಸ್ ಮುಖ್ಯ ಸಂಘಟಕ ಟೋಸಿ ಎಸ್ಟಾಂಗುಟ್, ಸೀನ್ ನದಿಯಲ್ಲಿ ಆಯೋಜಿಸಿರುವ ಉದ್ಘಾಟನಾ ಸಮಾರಂಭವು ‘ಸಂಭವನೀಯ ಆಯ್ಕೆಯಾಗಿದೆ’ ಎಂದು ಹೇಳಿದರು.

‘ಸೀನ್ ನದಿಯಲ್ಲಿ ಸಮಾರಂಭವನ್ನು ಆಯೋಜಿಸಿರುವುದು ಅತ್ಯಂತ ಸಂಭವನೀಯ ಯೋಜನೆಯಾಗಿದೆ‘ ಎಂದು ಎಸ್ಟಾಂಗುಟ್ ಅವರು ಆರ್‌ಎಫ್ಐಗೆ ತಿಳಿಸಿದರು.

‘ಅತ್ಯಂತ ಸುಂದರವಾದ, ಸಂಪೂರ್ಣವಾಗಿ ವಿಶಿಷ್ಟವಾದ ಉದ್ಘಾಟನಾ ಸಮಾರಂಭವನ್ನು ಆಯೋಜಿಸುವುದು ಮುಖ್ಯ ಉದ್ದೇಶವಾಗಿದೆ ಎಂಬುದನ್ನು ಅಧ್ಯಕ್ಷರು ಸೋಮವಾರ ಸ್ಪಷ್ಟವಾಗಿ ತಿಳಿಸಿದ್ದಾರೆ. ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಪ್ಯಾರಿಸ್‌ ಮಧ್ಯಭಾಗದಲ್ಲಿರುವ ಸೀನ್ ನದಿಯಲ್ಲಿ ದೋಣಿಗಳಲ್ಲಿ ಅಥ್ಲೀಟುಗಳು ಸಾಗಲಿದ್ದಾರೆ’ ಎಂದು ಎಸ್ಟಾಂಗುಟ್ ಹೇಳಿದರು.

ಗ್ರೀಸ್‌ನ ಒಲಿಂಪಿಯಾದಲ್ಲಿ ಒಲಿಂಪಿಕ್ ಜ್ಯೋತಿ ಬೆಳಗಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್ಟಾಂಗುಟ್, ‘ಈ ಸುಂದರ ಸಮಾರಂಭವನ್ನು ಅಭೂತಪೂರ್ವವಾಗಿ ನಡೆಸಲು ನಮ್ಮೆಲ್ಲಾ ಪ್ರಯತ್ನ ಹಾಕುತ್ತೇವೆ. ಜೊತೆಗೆ ಸಮಾನಾಂತರವಾಗಿ ಸಂದರ್ಭಕ್ಕೆ ತಕ್ಕಂತೆ ಇತರೆ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಆ ಸಮಯದಲ್ಲಿ ಪರಿಸ್ಥಿತಿ ಅವಲಂಬಿಸಿ, ಯೋಜನೆಯನ್ನು ಅಳವಡಿಸಿಕೊಳ್ಳುತ್ತೇವೆ’ ಎಂದು ತಿಳಿಸಿದರು. 

ಸಮಾರಂಭವನ್ನು ಸೀನ್ ನದಿಯಿಂದ ಕ್ರೀಡಾಂಗಣಕ್ಕೆ ಸ್ಥಳಾಂತರಿಸಬಹುದು ಎಂಬ ಅಧ್ಯಕ್ಷರ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿರುವ ಪ್ಯಾರಿಸ್ ಮೇಯರ್ ಅನ್ನೆ ಹಿಡಾಲ್ಗೊ, ‘ನನಗೆ ತಿಳಿದಿರುವ ಏಕೈಕ ಯೋಜನೆ ಪ್ಲಾನ್ ಎ. ಸಮಾರಂಭಕ್ಕೆ ಸಿದ್ಧರಾಗಿದ್ದೇವೆ ಮತ್ತು ಜಗತ್ತನ್ನು ಸ್ವಾಗತಿಸಲಿದ್ಧೇವೆ ಎಂಬುದು ನಮ್ಮ ಸಂದೇಶ ಎಂದು ಹೇಳಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT