ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆರುಗಿಯಾ ಚಾಲೆಂಜರ್ ಟೆನಿಸ್‌ ಟೂರ್ನಿ: ಸೆಮಿಗೆ ಸುಮಿತ್‌

Published 15 ಜೂನ್ 2024, 4:26 IST
Last Updated 15 ಜೂನ್ 2024, 4:26 IST
ಅಕ್ಷರ ಗಾತ್ರ

ಪೆರುಗಿಯಾ (ಇಟಲಿ): ಯಶಸ್ಸಿನ ಓಟವನ್ನು ಮುಂದುವರಿಸಿರುವ ಭಾರತದ ಸುಮಿತ್ ನಗಾಲ್‌, ಪೆರುಗಿಯಾ ಚಾಲೆಂಜರ್ ಟೆನಿಸ್‌ ಟೂರ್ನಿಯ ಸೆಮಿಫೈನಲ್ ತಲುಪಿದ್ದಾರೆ.

ಟೂರ್ನಿಯಲ್ಲಿ ಆರನೇ ಶ್ರೇಯಾಂಕದ ಪಡೆದಿರುವ ಭಾರತದ ಅಗ್ರ ಸಿಂಗಲ್ಸ್ ಆಟಗಾರ ಕ್ವಾರ್ಟರ್‌ಫೈನಲ್‌ನಲ್ಲಿ 6–4, 7–5 ರಿಂದ ಶ್ರೇಯಾಂಕರಹಿತ ಆಟಗಾರ ಮಾಕ್ಸ್‌ ಕಾಸ್ನಿಕೋವ್‌ಸ್ಕಿ (ಪೋಲೆಂಡ್‌) ಅವರನ್ನು ಸೋಲಿಸಿದರು. ಜರ್ಮನಿಯಲ್ಲಿ ಕಳೆದ ವಾರ ಹೀಲ್‌ಬ್ರಾನ್ ಚಾಳೆಂಜರ್‌ ಟೂರ್ನಿಯಿಂದೀಚೆಗೆ ಇದು ಸುಮಿತ್‌ಗೆ ಸತತ ಎಂಟನೇ ಗೆಲುವು.

ಅವರು ಸೆಮಿಫೈನಲ್‌ನಲ್ಲಿ ಸ್ಪೇನ್‌ನ ಬೆರ್ನಾಬ್ ಝಪಟಾ ಮಿರಾಲ್ಯಸ್‌ ಅವರನ್ನು ಎದುರಿಸಲಿದ್ದಾರೆ. ಶ್ರೇಯಾಂಕರಹಿತ ಆಟಗಾರ ಬೆರ್ನಾಬ್ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಲಾಸ್ಲೊ ದ್ಯೇರೆ (ಸರ್ಬಿಯಾ) ಅವರಿಗೆ 6–3, 6–3ರಿಂದ ಆಘಾತ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT