ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್ | ಗುಜರಾತ್‌ ಜೈಂಟ್ಸ್‌ ಶುಭಾರಂಭ

Published 2 ಡಿಸೆಂಬರ್ 2023, 18:54 IST
Last Updated 2 ಡಿಸೆಂಬರ್ 2023, 18:54 IST
ಅಕ್ಷರ ಗಾತ್ರ

ಅಹಮದಾಬಾದ್‌: ಸೋನು ಅವರ ಉತ್ತಮ ರೈಡಿಂಗ್‌ ನೆರವಿನಿಂದ ಗುಜರಾತ್‌ ಜೈಂಟ್ಸ್ ತಂಡ, ಶನಿವಾರ ಆರಂಭವಾದ ಪ್ರೊ ಕಬಡ್ಡಿ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು 38–32 ಪಾಯಿಂಟ್ಸ್‌ಗಳಿಂದ ಸೋಲಿಸಿತು.

ಟ್ರಾನ್ಸ್‌ ಸ್ಟೇಡಿಯಾದಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಮದ ವೇಳೆಗೆ 13–16 ರಿಂದ ಹಿಂದೆಯಿದ್ದ ಜೈಂಟ್ಸ್ ತಂಡ ಉತ್ತರಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿತು.

ಸೋನು ಒಂದೇ ರೈಡ್‌ನಲ್ಲಿ ಐವರನ್ನು ಔಟ್‌ ಮಾಡಿದ್ದು ಗಮನಸೆಳೆಯಿತು. ಈ ರೈಡ್‌ ನಂತರ 18–16ರಲ್ಲಿ ಪಡೆದ ಮುನ್ನಡೆಯನ್ನು ಗುಜರಾತ್‌ ಬಿಟ್ಟುಕೊಡಲಿಲ್ಲ. ವಿರಾಮದ ಏಳು ನಿಮಿಷಗಳ ನಂತರ ಮೊದಲ ಬಾರಿ ಟೈಟನ್ಸ್‌ ತಂಡವನ್ನು ಆಲೌಟ್‌ ಮಾಡಿತು. ಪಂದ್ಯದ ಕೊನೆಯ ಕೆಲವು ನಿಮಿಷಗಳಲ್ಲಿ ಮುನ್ನಡೆ ಹೆಚ್ಚುತ್ತಾ ಹೋಯಿತು. ಮುಕ್ತಾಯಕ್ಕೆ ನಾಲ್ಕು ನಿಮಿಷಗಳಿರುವಾಗ ಗುಜರಾತ್ ತಂಡ ಮತ್ತೊಮ್ಮೆ ಎದುರಾಳಿ ಅಂಕಣವನ್ನು ‘ಖಾಲಿ’ ಮಾಡಿತು. ಟೈಟನ್ಸ್‌ ತಂಡದ ನಾಯಕ ಹಾಗೂ ಸ್ಟಾರ್‌ ರೈಡರ್‌ ಪವನ್ ಸೆಹ್ರಾವತ್ ಅವರೂ ಉತ್ತಮ ಪ್ರದರ್ಶನ ನೀಡಿ 11 ಪಾಯಿಂಟ್ಸ್ ಕಲೆಹಾಕಿದರು.

ಯು ಮುಂಬಾಕ್ಕೆ ಜಯ: ದಿನದ ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡ 34–31 ಪಾಯಿಂಟ್‌ಗಳಿಂದ ಯು.ಪಿ ಯೋಧಾಸ್ ತಂಡವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT