ಪ್ಯಾರಿಸ್: ಇಟಾಲಿಯನ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿರುವ ಕರೋಲಿನಾ ಪ್ಲಿಸ್ಕೊವಾ ವಿಶ್ವ ಟೆನಿಸ್ ಕ್ರಮಾಂಕದಲ್ಲಿಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಜಪಾನಿನ ನವೊಮಿ ಒಸಾಕಾ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಭಾನುವಾರ ನಡೆದ ಇಟಾಲಿಯನ್ ಓಪನ್ ಫೈನಲ್ ಪಂದ್ಯದಲ್ಲಿ ಪ್ಲಿಸ್ಕೊವಾ ಅವರು ಇಂಗ್ಲೆಂಡ್ನ ಜೊಹಾನ್ನಾ ಕೊಂಥಾ ಅವರನ್ನು ಮಣಿಸಿದ್ದರು. ಭಾನುವಾರ ಆರಂಭವಾಗುವ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಪ್ಲಿಸ್ಕೊವಾ ಎರಡನೇ ಶ್ರೇಯಾಂಕ ಪಡೆದಿದ್ದಾರೆ.
ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಪ್ಲಿಸ್ಕೊವಾ ಅವರ ಸ್ಥಾನ ಏರಿಕೆಯಿಂದ ಏಂಜೆಲಿಕ್ ಕೆರ್ಬರ್ ಹಾಗೂ ಪೆಟ್ರಾ ಕ್ವಿಟೊವಾ ಅವರು ಕ್ರಮವಾಗಿ ಎರಡು ಹಾಗೂ ಒಂದು ಸ್ಥಾನ ಇಳಿಕೆ ಕಂಡಿದ್ದಾರೆ.
ರೋಮೆನಿಯಾದ ಸಿಮೊನಾ ಹಲೆಪ್ ಮೂರನೇ ಸ್ಥಾನದಲ್ಲಿ ಇದ್ದಾರೆ. ಅಮೆರಿಕಾದ ಸೆರೆನಾ ವಿಲಿಯಮ್ಸ್ ಮೊದಲ 10 ಆಟಗಾರ್ತಿಯರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.