ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಜಂಟಿ ಅಗ್ರಸ್ಥಾನಕ್ಕೆ ಪ್ರಜ್ಞಾನಂದ

Published 25 ಜನವರಿ 2024, 13:45 IST
Last Updated 25 ಜನವರಿ 2024, 13:45 IST
ಅಕ್ಷರ ಗಾತ್ರ

ವಿಯ್ಕ್‌ ಆನ್‌ ಝೀ (ನೆದರ್ಲೆಂಡ್ಸ್‌): ಭಾರತದ ಆರ್‌. ಪ್ರಜ್ಞಾನಂದ ಅವರು ಬುಧವಾರ ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಒಂಬತ್ತನೇ ಸುತ್ತಿನ ಪಂದ್ಯದಲ್ಲಿ ಹಾಲಿ ಮತ್ತು ನಾಲ್ಕು ಬಾರಿಯ ಮಹಿಳಾ ವಿಶ್ವ ಚಾಂಪಿಯನ್ ವೆಂಜುನ್ ಜು ಅವರನ್ನು ಸೋಲಿಸಿ, ಜಂಟಿ ಅಗ್ರಸ್ಥಾನಕ್ಕೆ ಏರಿದರು.

ತನ್ಮೂಲಕ ಪ್ರಜ್ಞಾನಂದ ಅವರು ಇತ್ತೀಚಿನ ವರ್ಷಗಳಲ್ಲಿ ಓಪನ್ ಹಾಗೂ ಮಹಿಳಾ ವಿಭಾಗದ ಹಾಲಿ ಚಾಂಪಿಯನ್ನರನ್ನು ಸೋಲಿಸಿದ ಏಕೈಕ ಆಟಗಾರ ಎನಿಸಿದರು. ವಾರದ ಹಿಂದೆ ಇದೇ ಟೂರ್ನಿಯಲ್ಲಿ ಅವರು ವಿಶ್ಚ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿದ್ದರು.

ಭಾರತದ ಡಿ. ಗುಕೇಶ್, ಉಜ್ಬೇಕಿಸ್ತಾನನ ನಾಡಿರ್ಬೆಕ್ ಅಬ್ದುಸತ್ತಾರೋವ್ ಮತ್ತು ಆತಿಥೇಯ ನೆದರ್ಲೆಂಡ್ಸ್‌ನ ಅನೀಶ್ ಗಿರಿ ಜತೆ 5.5 ಪಾಯಿಂಟ್‌ಗಳೊಂದಿಗೆ ಪ್ರಜ್ಞಾನಂದ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT