ಮಂಗಳೂರು: ರೋಚಕ ಹೋರಾಟದಲ್ಲಿ ಕೇವಲ ಒಂದು ಪಾಯಿಂಟ್ನಿಂದ ಎದುರಾಳಿ ತಂಡವನ್ನು ಮಣಿಸಿದ ಕರ್ನಾಟಕದ ಬಾಲಕರು ಪದವಿಪೂರ್ವ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ನೆಟ್ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿದರು. ಆತಿಥೇಯ ಬಾಲಕಿಯರ ತಂಡವೂ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತು.

ಶಾಲಾ ಶಿಕ್ಷಣ ಇಲಾಖೆ ಹಾಗೂ ಮಂಗಳೂರು ತಾಲ್ಲೂಕಿನ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಪಿಲಿಕುಳದಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕರ ವಿಭಾಗದಲ್ಲಿ ಚಂಡೀಗಢವನ್ನು ಕರ್ನಾಟಕ 31–30ರಲ್ಲಿ ಮಣಿಸಿತು. ನಾಲ್ಕರ ಘಟ್ಟದ ಮತ್ತೊಂದು ರೋಮಾಂಚಕಾರಿ ಹಣಾಹಣಿಯಲ್ಲಿ ಕೇರಳವನ್ನು ಪಂಜಾಬ್ 39–38ರಲ್ಲಿ ಸೋಲಿಸಿತು.

ಬಾಲಕಿಯರ ವಿಭಾಗದಲ್ಲಿ ಆಧಿಪತ್ಯ ಮುಂದುವರಿಸಿದ ಕರ್ನಾಟಕ ಸೆಮಿಫೈನಲ್ನಲ್ಲಿ ಮಹಾರಾಷ್ಟ್ರವನ್ನು 24–14ರಲ್ಲಿ ಮಣಿಸಿತು. ಪಂಜಾಬ್ ವಿರುದ್ಧ ಕೇರಳ 32–27ರಲ್ಲಿ ಜಯ ಸಾಧಿಸಿತು.