ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್‌ ಪಿಸ್ಟೋರಿಯಸ್‌ಗೆ ಪೆರೋಲ್

Published 5 ಜನವರಿ 2024, 22:43 IST
Last Updated 5 ಜನವರಿ 2024, 22:43 IST
ಅಕ್ಷರ ಗಾತ್ರ

ಜೋಹಾನೆಸ್‌ಬರ್ಗ್‌: ಗೆಳತಿ, ರೂಪದರ್ಶಿ ರೀವಾ ಸ್ಟೀನ್‌ಕ್ಯಾಂಪ್ ಅವರ ಕೊಲೆ ಆರೋಪದಲ್ಲಿ ಜೈಲಿನಲ್ಲಿದ್ದ ದಕ್ಷಿಣ ಆಫ್ರಿಕಾದ ‘ಬ್ಲೇಡ್ ರನ್ನರ್’ ಖ್ಯಾತಿಯ ಅಥ್ಲೀಟ್ ಆಸ್ಕರ್ ಪಿಸ್ಟೊರಿಯಸ್‌ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರು ಈಗ ತಮ್ಮ ನಿವಾಸದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಶಿಕ್ಷೆಯ ಒಟ್ಟು ಅವಧಿಯಲ್ಲಿ ಅರ್ಧಕ್ಕಿಂತ ಹೆಚ್ಚು ಅನುಭವಿಸಿದ 37 ವರ್ಷದ ಪಿಸ್ಟೊರಿಯಸ್‌ ಅವರನ್ನು ರಾಜಧಾನಿ ಪ್ರಿಟೋರಿಯಾದ ಹೊರವಲಯದ ಜೈಲಿನಿಂದ ಕರೆದೊಯ್ಯಲಾಯಿತು.

2013ರ ಪ್ರೇಮಿಗಳ ದಿನದಂದು ಪಿಸ್ಟೊರಿಯಸ್‌ 29 ವರ್ಷದ ರೂಪದರ್ಶಿ ಸ್ಟೀನ್‌ಕ್ಯಾಂಪ್ ಅವರನ್ನು ಪ್ರಿಟೋರಿಯಾದ ತಮ್ಮ ಮನೆಯ ಬಾತ್‌ರೂಮ್‌ ಬಾಗಿಲಿನ ಮೂಲಕ ನಾಲ್ಕು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

ಸುದೀರ್ಘ ವಿಚಾರಣೆ ಮತ್ತು ಹಲವಾರು ಮೇಲ್ಮನವಿಗಳ ನಂತರ 2017 ರಲ್ಲಿ ಪಿಸ್ಟೋರಿಯಸ್‌ ದೋಷಿ ಎಂದು ಸಾಬೀತಾಗಿ 13 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ತಾನು ತಪ್ಪಿತಸ್ಥನಲ್ಲ ಹಾಗೂ ಕೋಪದಿಂದ ಆಕೆಯನ್ನು ಹತ್ಯೆ ಮಾಡಿಲ್ಲ. ಯಾರೊ ಮನೆಯೊಳಗೆ ನುಸುಳಿದ್ದಾರೆಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿದೆ ಎಂದು ಕೋರ್ಟ್‌ಗೆ ಹೇಳಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT