ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಅಗ್ರ ಟೇಬಲ್‌ ಟೆನಿಸ್‌ ಆಟಗಾರ್ತಿಯಾಗಿ ಶ್ರೀಜಾ ಆಕುಲಾ

Published 23 ಏಪ್ರಿಲ್ 2024, 13:11 IST
Last Updated 23 ಏಪ್ರಿಲ್ 2024, 13:11 IST
ಅಕ್ಷರ ಗಾತ್ರ

ನವದೆಹಲಿ: ಕಾಮನ್ವೆಲ್ತ್‌ ಗೇಮ್ಸ್‌ ಮಿಕ್ಸೆಡ್ ಡಬಲ್ಸ್ ಚಾಂಪಿಯನ್ ಶ್ರೀಜಾ ಆಕುಲಾ ಅವರು ಮಂಗಳವಾರ ಭಾರತದ ಅಗ್ರಮಾನ್ಯ ಟೇಬಲ್‌ ಟೆನಿಸ್‌ ಆಟಗಾರ್ತಿ ಎನಿಸಿದರು. ಇತ್ತೀಚಿನ ಐಟಿಟಿಎಫ್‌ ಪಟ್ಟಿಯಲ್ಲಿ ಅವರು ಮಣಿಕಾ ಬಾತ್ರಾ ಅವರನ್ನು ಹಿಂದೆಹಾಕಿದ್ದು 38ನೇ ಸ್ಥಾನಕ್ಕೆ ಏರಿದ್ದಾರೆ.

ಮಣಿಕಾ ಈ ಹಿಂದಿನ ರ್‍ಯಾಂಕಿಂಗ್‌ಗಿಂತ ಎರಡು ಸ್ಥಾನ ಕೆಳಗಿಳಿದು 39ನೇ ಸ್ಥಾನದಲ್ಲಿದ್ದಾರೆ.

25 ವರ್ಷದ ಶ್ರೀಜಾ, ಈ ವರ್ಷ ಉತ್ತಮ ಸಾಧನೆ ತೋರಿದ್ದು, ಡಬ್ಲ್ಯುಟಿಟಿ ಫೀಡರ್‌ ಕಾರ್ಪಸ್‌ ಕ್ರಿಸ್ಟಿ ಮತ್ತು ಡಬ್ಲ್ಯುಟಿಟಿ ಫೀಡರ್‌ ಬೇರೂತ್‌ನಲ್ಲಿ ನಡೆದ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದರು. ಇವು ಕ್ರಮವಾಗಿ ಜನವರಿ ಮತ್ತು ಮಾರ್ಚ್‌ನಲ್ಲಿ ನಡೆದಿದ್ದವು. ಇದರ ಜೊತೆಗೆ ಗೋವಾದಲ್ಲಿ ನಡೆದ ಡಬ್ಕ್ಯಟಿಟಿ ಸ್ಟಾರ್‌ ಕಂಟೆಂಡರ್ ಟೂರ್ನಿಯ ಕ್ವಾರ್ಟರ್‌ಫೈನಲ್‌ ತಲುಪಿದ್ದರು.

ಯಶಸ್ವಿನಿ ಘೋರ್ಪಣೆ ಮತ್ತು ಅರ್ಚನಾ ಕಾಮತ್‌ ಅವರು 99ನೇ ಮತ್ತು 100ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಶರತ್ ಕಮಲ್ ಪುರುಷರ ವಿಭಾಗದಲ್ಲಿ ಭಾರತದ ಆಟಗಾರರ ಪೈಕಿ ಮುಂಚೂಣಿಯಲ್ಲಿದ್ದು 37ನೇ ಸ್ಥಾನದಲ್ಲಿದ್ದಾರೆ. ಜಿ.ಸತ್ಯನ್ ಮತ್ತು ಮಾನವ್‌ ಠಕ್ಕರ್ ಅವರು 60 ಮತ್ತು 61ನೇ ಸ್ಥಾನದಲ್ಲಿದ್ದಾರೆ.

ರಾಷ್ಟ್ರೀಯ ಚಾಂಪಿಯನ್ ಹರ್ಮಿತ್ ದೇಸಾಯಿ ಅವರು 64ನೇ ಸ್ಥಾನಕ್ಕೆ ಸರಿದಿದ್ದಾರೆ.

ಭಾರತ ಟಿ.ಟಿ. ತಂಡಗಳು ಈಗಾಗಲೇ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿವೆ. ಭಾರತ ಟೇಬಲ್ ಟೆನಿಸ್‌ ಫೆಡರೇಷನ್‌, ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಎರಡು ಸಿಂಗಲ್ಸ್ ಪ್ರವೇಶಗಳನ್ನು ಮೇ 16ರೊಳಗೆ ಆಗಿನ ವಿಶ್ವ ರ್‍ಯಾಂಕಿಂಗ್ ಪರಿಗಣಿಸಿ ನಿರ್ಧರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT