ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿ| ಹದಿನಾರರ ಘಟ್ಟಕ್ಕೆ ಗೌರಿ ಲಗ್ಗೆ

ರಾಜ್ಯ ರ‍್ಯಾಂಕಿಂಗ್‌ ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿ
Published 24 ಮೇ 2024, 1:07 IST
Last Updated 24 ಮೇ 2024, 1:07 IST
ಅಕ್ಷರ ಗಾತ್ರ

ದಾವಣಗೆರೆ: ದಿಟ್ಟ ಆಟ ಆಡಿದ ಬೆಂಗಳೂರಿನ ಗೌರಿ ಸತೀಶ್‌, ರಾಜ್ಯ ರ‍್ಯಾಂಕಿಂಗ್‌ ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ 16ರ ಘಟ್ಟಕ್ಕೆ ಲಗ್ಗೆ ಇಟ್ಟರು.

ಇಲ್ಲಿನ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ 15 ವರ್ಷದೊಳಗಿನ ಬಾಲಕಿಯರ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ ಗೌರಿ 21–8, 21–15 ರಿಂದ ರುತ್ವಾ ಯತೀಶ್‌ ವಿರುದ್ಧ ಗೆದ್ದರು. 

ಇತರ ಪಂದ್ಯಗಳಲ್ಲಿ ಐಕ್ಯಾ ಶೆಟ್ಟಿ 21-7, 21-16ರಿಂದ ಎಸ್‌.ಸ್ಮೃತಿ ಎದುರು, ಕೀರ್ತಿ ಬಾಲಾಜಿ 21-15, 21-14 ರಿಂದ ಅಕ್ಷರಾ ಶ್ರೀನಿಧಿ ವಿರುದ್ಧ, ನಿಧಿ ಆತ್ಮರಾಮ್‌ 21-5, 21-13 ರಿಂದ ವೈಷ್ಣವಿ ನಾರಾಯಣನ್‌ ಎದುರು ಜಯಿಸಿದರು.  

15 ವರ್ಷದೊಳಗಿನ ಬಾಲಕರ ವಿಭಾಗದ ಪಂದ್ಯಗಳಲ್ಲಿ ಶ್ಯಾಮ್‌ ಬಿಂಡಿಗನವಿಲೆ 21-9, 21-7 ರಿಂದ ವಿ.ಶಿವಾಂಕ್‌ ಎದುರು,  ಅನಿರುದ್ಧ್‌ ರೆಡ್ಡಿ 21-10, 21-9 ರಿಂದ ಆಯುಷ್‌ ಆರ್‌.ಲಾಲ್‌ ವಿರುದ್ಧ, ಸಾತ್ವಿಕ್‌ ಎಸ್‌.ಪ್ರಭು 21-10, 17-21, 21-16 ರಿಂದ ಆದಿತ್ಯ ಜೋಶಿ ಎದುರು, ವಿ.ದುಷ್ಯಂತ್‌ ಗೌಡ 21-19, 21-12 ರಿಂದ ಗೌತಮ್‌ ಎಸ್‌.ನಾಯರ್‌ ವಿರುದ್ಧ ಗೆಲುವು ಕಂಡರು.  

ಬಾಲಕರ ಡಬಲ್ಸ್‌ನಲ್ಲಿ ಆರವ್‌ ಸ್ವಾಮಿನಾಥನ್‌ ಮತ್ತು ಆಯುಷ್‌ ಮಿಶ್ರಾ 14-21, 21-16, 21-12 ರಿಂದ ಅವನೀಶ್‌ ಎಸ್‌. ಮತ್ತು ವಿಶೃತ್‌ ಗಣೇಶ್‌ ಎದುರು, ನೀರವ್‌ ಜಿ. ಮತ್ತು ವಿವಾನ್‌ ಆರ್‌. 21-19, 13-21, 21-13 ರಿಂದ ದೇವಿನ್‌ ಚಂದ್ರ ಜಿ.ಸಿ. ಮತ್ತು ಹೆಶಾನ್‌ ಹರೀಶ್‌ ವಿರುದ್ಧ ಜಯಗಳಿಸಿದರು.

ಬಾಲಕಿಯರ ಡಬಲ್ಸ್‌ನಲ್ಲಿ ಮಾನ್ಯಾ ಶ್ರೀಕಾಂತ್‌ ಹೊಳ್ಳ ಮತ್ತು ಶ್ರದ್ಧಾ ಮನೋಜ್‌ 21-16, 21-15 ರಿಂದ ದೇವಾಂಶಿ ಭಾಟಿಯಾ ಮತ್ತು ಕೆ.ಗೆಹ್ನಾ ಭೀಮಯ್ಯ ಎದುರು, ಬಿಂದುಶ್ರೀ ಬಿ.ಎಂ. ಮತ್ತು ಚಿನ್ಮಯಿ ಎಚ್‌.ಡಿ. 21-13, 21-19 ರಿಂದ ಆಶಿತಾ ಶಾನ್‌ಭಾಗ್‌ ಮತ್ತು ಸೊನಾಲಿ ಎಸ್‌. ವಿರುದ್ಧ, ಲೇಖನಿ ಶ್ರೀನಿವಾಸ್‌ ಮತ್ತು ರಿದ್ಧಿ ದೇವಯ್ಯ ಪಿ. 21-13, 21-13 ರಿಂದ ಜೆಸ್ಸಿ ಭಟ್‌ ಮತ್ತು ಮನಸ್ವಿ ಜಿ.ಎಸ್‌. ಎದುರು ಗೆದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT