ಫೋರ್ಟ್ ವರ್ತ್ (ಅಮೆರಿಕ): ಭಾರತದ ಪ್ರಿಯಾಂಶು ರಾಜಾವತ್ ಅವರು ಚೀನಾ ತೈಪಿಯ ಹುವಾಂಗ್ ಯು ಕೈ ಅವರನ್ನು ನೇರ ಗೇಮ್ಗಳಿಂದ ಮಣಿಸಿ ಅಮೆರಿಕ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಕ್ವಾರ್ಟರ್ಫೈನಲ್ ತಲುಪಿದರು.

ಎಂಟನೇ ಶ್ರೇಯಾಂಕದ ರಾಜಾವತ್ 21–8, 21–16 ರಿಂದ ಹುವಾಂಗ್ ಅವರನ್ನು ಸೋಲಿಸಿದರು. ಅವರ ಮುಂದಿನ ಎದುರಾಳಿ, ನಾಲ್ಕನೇ ಶ್ರೇಯಾಂಕದ ಲೀ ಲಾನ್ ಷಿ (ಚೀನಾ).

ಕಾಮನ್ವೆಲ್ತ್ ಕ್ರೀಡೆಗಳ ಕಂಚಿನ ಪದಕ ವಿಜೇತರಾದ ಟ್ರೀಸಾ ಜೋಳಿ– ಗಾಯತ್ರಿ ಗೋಪಿಚಂದ್ ಜೋಡಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಎಂಟರ ಘಟ್ಟ ತಲುಪಿತು. ಭಾರತದ ಆಟಗಾರ್ತಿಯರು ಎರಡನೇ ಸುತ್ತಿನಲ್ಲಿ 16–21, 21–11, 21–19ರಲ್ಲಿ ಚೀನಾ ತೈಪಿಯ ಹ್ಸಿ ಪೀ ಶಾನ್–ಹುವಾಂಗ್ ಎನ್ ತ್ಸು ಅವರನ್ನು ಸೋಲಿಸಿದರು.

ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಎರಡನೇ ಶ್ರೇಯಾಂಕದ ಟ್ರೀಸಾ–ಗಾಯತ್ರಿ ಎಂಟರ ಘಟ್ಟದ ಪಂದ್ಯದಲ್ಲಿ ಆರನೇ ಶ್ರೇಯಾಂಕದ ರುಯಿ ಹಿರೊಕಮಿ– ಯುನಾ ಕೇಟೊ ಜೋಡಿಯನ್ನು ಎದುರಿಸಲಿದ್ದಾರೆ.

ಮಹಿಳಾ ಸಿಂಗಲ್ಸ್ನಲ್ಲಿ ಮಾಳವಿಕಾ ಬನ್ಸೋಡ್ ಹಿನ್ನಡೆಯಿಂದ ಚೇತರಿಸಿ 15–21, 21–19, 21–14 ರಿಂದ ಝೆಕ್ ರಿಪಬ್ಲಿಕ್ನ ತೆರೇಸಾ ಸ್ವಬಿಕೋವಾ ಅವರನ್ನು ಸೋಲಿಸಿ ಕ್ವಾರ್ಟರ್ಫೈನಲ್ಗೆ ಲಗ್ಗೆಯಿಟ್ಟರು. ಮಾಳವಿಕಾ, ಈ ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಪಡೆದಿದ್ದಾರೆ. ಅವರು ಮುಂದಿನ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ಕ್ರಿಸ್ಟಿ ಗಿಲ್ಮೊರ್ (ಸ್ಕಾಟ್ಲೆಂಡ್) ಎದುರು ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.