ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತಕ್ಕೆ ಸೋಲು

Last Updated 24 ಮೇ 2019, 18:24 IST
ಅಕ್ಷರ ಗಾತ್ರ

ಜಿಂಚಾನ್‌, ಕೊರಿಯಾ: ಮೊದಲ ಎರಡು ಪಂದ್ಯಗಳಲ್ಲಿ ಅಮೋಘ ಸಾಧನೆ ಮಾಡಿದ್ದ ಭಾರತ ಮಹಿಳೆಯರ ತಂಡದವರು ಕೊನೆಯಲ್ಲಿ ಮುಗ್ಗರಿಸಿದರು. ಇಲ್ಲಿ ನಡೆದ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಕೊರಿಯಾ ಎದುರು 0–4ರಿಂದ ಸೋತಿತು. ಆದರೂ 2–1ರಲ್ಲಿ ಸರಣಿ ಭಾರತದ ಪಾಲಾಯಿತು.

ಶುಕ್ರವಾರದ ಪಂದ್ಯದಲ್ಲಿ ಆತಿಥೇಯರು ಆರಂಭದಲ್ಲೇ ಹಿಡಿತ ಸಾಧಿಸಿದರು. ಹೀಗಾಗಿ ಭಾರತ ತಂಡ ತೀವ್ರ ಒತ್ತಡಕ್ಕೆ ಒಳಗಾಯಿತು. ರಕ್ಷಣಾ ವಿಭಾಗವನ್ನು ಸತತವಾಗಿ ಕಾಡಿದ ಎದುರಾಳಿ ಆಟಗಾರ್ತಿಯರು ನಾಲ್ಕು ಬಾರಿ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು.ಐದು ಪೆನಾಲ್ಟಿ ಕಾರ್ನರ್ ಅವಕಾಶಗಳು ದಕ್ಷಿಣ ಕೊರಿಯಾ ಒಂದನ್ನು ಮಾತ್ರ ಗೋಲಾಗಿ ಪರಿವರ್ತಿಸಿತು.

29ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಜಂಗ್ ಹೀಸನ್‌ ಕೈಚಳಕ ತೋರಿದರು. ಅವರು ಕೊರಿಯಾಗೆ ಮುನ್ನಡೆ ಗಳಿಸಿಕೊಟ್ಟರು. 41ನೇ ನಿಮಿಷದಲ್ಲಿ ಕಿಮ್ ಹ್ಯೂನ್‌ಜಿ ಮತ್ತು ಕಾಂಗ್‌ ಜಿನಾ ತಲಾ ಒಂದೊಂದು ಗೋಲು ಗಳಿಸಿದರು. ಮೂರು ಗೋಲುಗಳ ಹಿನ್ನಡೆ ಅನುಭವಿಸಿದ ಭಾರತ ತಿರುಗೇಟು ನೀಡಲು ಪ್ರಯತ್ನಿಸಿತು. ಆದರೆ ಇದಕ್ಕೆ ಫಲ ದೊರಕಲಿಲ್ಲ. ಲೀ ಯೂರಿ 53ನೇ ನಿಮಿಷದಲ್ಲಿ ಗಳಿಸಿದ ಗೋಲಿನ ಮೂಲಕ ಎದುರಾಳಿಗಳು ಗೆಲುವಿನ ಅಂತರವನ್ನು ಹೆಚ್ಚಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT