ಮಂಗಳವಾರ, ಆಗಸ್ಟ್ 20, 2019
21 °C
ಪಾಕ್‌ ವಿರುದ್ಧ ಮುಂದಿನ ಪಂದ್ಯ

ಏಷ್ಯನ್‌ ವಾಲಿಬಾಲ್‌: ಸೆಮಿಫೈನಲ್‌ಗೆ ಭಾರತ

Published:
Updated:

ಯಾಂಗೊನ್‌, ಮ್ಯಾನ್‌ಮಾರ್‌: ಆಸ್ಟ್ರೇಲಿಯಾ ತಂಡವನ್ನು ಶುಕ್ರವಾರ 3–1 ಸೆಟ್‌ಗಳಿಂದ ಸೋಲಿಸಿದ  ಭಾರತ ತಂಡದವರು ಏಷ್ಯ 23 ವರ್ಷದೊಳಗಿನವರ ಪುರುಷರ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು. ಭಾರತ ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ.

ಕ್ವಾರ್ಟರ್‌ಫೈನಲ್‌ನಲ್ಲಿ ಮೊದಲ ಸೆಟ್‌ ನಂತರ ಮೈಕೊಡವಿಕೊಂಡ ಭಾರತ ತಂಡ ಅಂತಿಮವಾಗಿ 16–25, 25–19, 25–21, 27–25 ರಲ್ಲಿ ಜಯಗಳಿಸಿದರು. ದಾಳಿಗಾರ ಅಮಿತ್‌ ಗುಲಿಯಾ ಮತ್ತು ‘ಸೆಟ್ಟರ್’ ಮುತ್ತುಸ್ವಾಮಿ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಾಕಿಸ್ತಾನ ಇನ್ನೊಂದು ಪಂದ್ಯದಲ್ಲಿ ಕಜಕಸ್ತಾನ್ ತಂಡವನ್ನು ಮಣಿಸಿತು. 

ಇದಕ್ಕೆ ಮೊದಲು ಚೀನಾ ತೈಪಿ ಮತ್ತು ಜಪಾನ್‌ ತಂಡಗಳು ಕ್ರಮವಾಗಿ ಚೀನಾ ಮತ್ತು ಶ್ರೀಲಂಕಾ ತಂಡವನ್ನು ಸೋಲಿಸಿ ಸೆಮಿಫೈನಲ್‌ ತಲುಪಿದ್ದವು. ತೈಪಿ ಮತ್ತು ಜಪಾನ್‌ ಸೆಣಸಾಟ ಶನಿವಾರ ನಡೆಯಲಿದೆ.

 

 

Post Comments (+)