ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಂಚ - ನಿಮಗೆಷ್ಟು ಪರಿಚಿತ?

Last Updated 5 ಮೇ 2018, 19:30 IST
ಅಕ್ಷರ ಗಾತ್ರ

1. ಧರೆಯ ಅತ್ಯಂತ ವಿಶಾಲ ವೃಷ್ಟಿವನ ‘ಅಮೆಜೋನಿಯಾ’ದ ಒಂದು ದೃಶ್ಯ ಚಿತ್ರ-1 ರಲ್ಲಿದೆ. ಈ ಅತ್ಯದ್ಭುತ ಕಾನನ ದಕ್ಷಿಣ ಅಮೆರಿಕದ ಎಂಟು ರಾಷ್ಟ್ರಗಳಲ್ಲಿ ಹರಡಿದೆ. ಕೆಳಗಿನ ಪಟ್ಟಿಯಲ್ಲಿರುವ ಯಾವ ಯಾವ ರಾಷ್ಟ್ರಗಳು ಅಮೆಜೋನಿಯಾ ಪ್ರದೇಶದಲ್ಲಿವೆ ಗುರುತಿಸಬಲ್ಲಿರಾ?
ಅ. ವೆನಿಜುಯೆಲಾ→ಬ. ಅರ್ಜೆಂಟಿನಾ
ಕ. ಕೊಲಂಬಿಯಾ→ಡ. ಬ್ರೆಜಿಲ್
ಇ. ಚಿಲಿ→→ಈ. ಈಕ್ವೆಡಾರ್ಉ . ಪೆರು

2. ಗೊರಿಲ್ಲಾ ಗುಂಪೊಂದರ ‘ಯಜಮಾನ’ ಚಿತ್ರ-2ರಲ್ಲಿದೆ. ಇಡೀ ಧರೆಯಲ್ಲಿ ಗೊರಿಲ್ಲಾಗಳ ನೈಸರ್ಗಿಕ ನೆಲೆ ಯಾವ ಪ್ರದೇಶಕ್ಕೆ ಸೀಮಿತವಾಗಿದೆ ಗೊತ್ತೇ?
ಅ. ಮಧ್ಯ ಅಮೆರಿಕ→ಬ. ಆಗ್ನೇಯ ಏಷ್ಯಾ
ಕ. ಮಧ್ಯ ಆಫ್ರಿಕಾ→ಡ. ದಕ್ಷಿಣ ಆಫ್ರಿಕಾ

3. ನಮ್ಮ ಪೃಥ್ವಿಯ ಭೂಖಂಡವೊಂದರ ಒಂದು ದೃಶ್ಯ ಚಿತ್ರ-3ರಲ್ಲಿದೆ. ಈ ದೃಶ್ಯವನ್ನು ಗಮನಿಸಿ ಇವೆರಡು ಪ್ರಶ್ನೆಗಳಿಗೆ ಉತ್ತರಿಸಿ:
ಅ. ಇದು ಯಾವ ಭೂಖಂಡದ ದೃಶ್ಯ?
ಬ. ನಿಮ್ಮ ತೀರ್ಮಾನಕ್ಕೆ ಎರಡು ಆಧಾರಗಳು ಯಾವುವು?

4. ಸುಂದರ, ವರ್ಣಮಯ ‘ಹವಳದ ದಿಬ್ಬ’ವೊಂದು ಚಿತ್ರ-4ರಲ್ಲಿದೆ. ಧರೆಯ ಅತ್ಯಂತ ವಿಸ್ತಾರ ಹವಳ ಸಾಮ್ರಾಜ್ಯ ‘ದಿ ಗ್ರೇಟ್ ಬ್ಯಾರಿಯರ್ ರೀಫ್’ ಯಾವ ಸಾಗರ ಪ್ರದೇಶದಲ್ಲಿದೆ?
ಅ. ಉತ್ತರ ಅಟ್ಲಾಂಟಿಕ್ ಸಾಗರ
ಬ. ದಕ್ಷಿಣ ಅಟ್ಲಾಂಟಿಕ್ ಸಾಗರ
ಕ. ಉತ್ತರ ಪೆಸಿಫಿಕ್ ಸಾಗರ
ಡ. ದಕ್ಷಿಣ ಪೆಸಿಫಿಕ್ ಸಾಗರ
ಇ. ಹಿಂದೂ ಮಹಾಸಾಗರ

5. ವಲಸೆ ಪಯಣದ ಹಾದಿಯಲ್ಲಿ ಕಳ್ಳ ಬೇಟೆಗಾರರು ಹರಡುವ ಬಲೆಗಳಿಗೆ ಸಿಲುಕಿ ಪ್ರತಿ ವರ್ಷ ಕೋಟ್ಯಂತರ ಹಕ್ಕಿಗಳು ಬಲಿಯಾಗುತ್ತಿವೆ; ಅಂತಹ ಎರಡು ಕರುಣಾಜನಕ ದೃಶ್ಯಗಳು ಚಿತ್ರ-5 ಮತ್ತು ಚಿತ್ರ-6ರಲ್ಲಿವೆ. ಪ್ರಮುಖವಾಗಿ ವಿಕೃತ ಬುದ್ಧಿಯ ದುರುಳ ಮನುಷ್ಯರ ಜಿಹ್ವಾ ಚಾಪಲ್ಯಕ್ಕಾಗಿ ನಡೆಯುತ್ತಿರುವ ಈ ಅಕೃತ್ಯ ಯಾವ ಭೂಖಂಡದಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಂಭವಿಸುತ್ತಿದೆ ಗೊತ್ತೇ?
ಅ. ಏಷ್ಯಾ→→ಬ. ಯೂರೋಪ್
ಕ. ಉತ್ತರ ಅಮೆರಿಕ→ಡ. ಆಸ್ಟ್ರೇಲಿಯಾ

6. ಉನ್ನತ, ಹಿಮಾವೃತ ಪರ್ವತ ಶಿಖರವೊಂದು ಚಿತ್ರ-7ರಲ್ಲಿದೆ. ಇಲ್ಲಿ ಹೆಸರಿಸಿರುವ ಸುಪ್ರಸಿದ್ಧ ಪರ್ವತ, ಪರ್ವತ ಶಿಖರಗಳನ್ನು ಮತ್ತು ಅವುಗಳನ್ನು ನೇರ ನೋಡಬಹುದಾದ ರಾಷ್ಟ್ರಗಳನ್ನೂ ಸರಿಹೊಂದಿಸಿ:
1. ಕಿನಬಾಲು→ಅ. ಟಿಬೆಟ್
2. ಹ್ಯೂವಾಂಗ್→ಬ. ನ್ಯೂಜಿಲೆಂಡ್
3. ಕೈಲಾಶ್‌→ಕ. ಚೀನಾ
4. ಮೇಟರ್ ಹಾರ್ನ್‌→ಡ. ಬೋರ್ನಿಯೊ
5. ಕುಕ್‌ →ಇ. ಸ್ವಿಟ್ಜರ್ಲೆಂಡ್

7. ಮಧ್ಯ ಅಮೆರಿಕದ ಪುರಾತನ ನಾಗರಿಕತೆಯೊಂದಕ್ಕೆ ಸಂಬಂಧಿಸಿದ ವಿಶ್ವಪ್ರಸಿದ್ಧ ನಗರಾವಶೇಷ ‘ಮಚ್ಚು ಪಿಚ್ಚು’ ಚಿತ್ರ-8ರಲ್ಲಿದೆ. ಮಚ್ಚು ಪಿಚ್ಚು ನಗರವನ್ನು ನಿರ್ಮಿಸಿದ ನಾಗರಿಕತೆ ಇವುಗಳಲ್ಲಿ ಯಾವುದು?
ಅ. ಮಾಯನ್ ನಾಗರಿಕತೆ ಬ. ಎಜ್ ಟೆಕ್ ನಾಗರಿಕತೆ
ಕ. ಇಂಕಾ ನಾಗರಿಕತೆ ಡ. ಆಲ್ಮೆಕ್ ನಾಗರಿಕತೆ

8. ಕೆನಡಾ ದೇಶದ ಪ್ರಸಿದ್ಧ ನಗರ ‘ಟೊರಾಂಟೊ’ದ ಒಂದು ದೃಶ್ಯ ಚಿತ್ರ-9ರಲ್ಲಿದೆ. ಕೆನಡಾ ದೇಶದ ಕೆಲವು ಇತರ ನಗರಗಳು ಈ ಕೆಳಗಿನ ಪಟ್ಟಿಯಲ್ಲಿವೆ. ಅವುಗಳನ್ನು ಗುರುತಿಸಬಲ್ಲಿರಾ?
ಅ. ಕೇಪ್ ಟೌನ್→ಬ. ಫ್ರಾಂಕ್‌ಫರ್ಟ್
ಕ. ಒಟ್ಟಾವಾ→→ಡ. ಸಾವೋ ಪಾಲೋ
ಇ. ಮಾಂಟ್ರಿಯಾಲ್→ಈ. ಕ್ಯಾಲ್ ಗರೀ

9. ‘ಹಿಮ ನದಿ’ಗಳಿಂದ ಬಗೆಯಲ್ಪಟ್ಟು ರೂಪುಗೊಳ್ಳುವ ಕಣಿವೆಗಳಿಗೆ ಕಡಲ ನೀರು ನುಗ್ಗಿ ಮೈದಳೆವ ವಿಶಿಷ್ಟ, ಅತಿ ಸುಂದರ, ವಿಸ್ಮಯಕರ, ವಿಖ್ಯಾತ ಭೂ ಲಕ್ಷಣ ‘ಫ್ಯೋರ್ಡ್’ಗಳ (ಕಡಲ ಚಾಚು) ಒಂದು ಚಿತ್ರ ಇಲ್ಲಿದೆ (ಚಿತ್ರ-10). ಫ್ಯೋರ್ಡ್‌ಗಳು ಗರಿಷ್ಠ ಸಂಖ್ಯೆಯಲ್ಲಿರುವ ದೇಶ ಇವುಗಳಲ್ಲಿ ಯಾವುದು ಗೊತ್ತೇ?
ಅ. ನಾರ್ವೆ→→ಬ. ಸ್ವೀಡನ್
ಕ. ಗ್ರೀನ್ ಲ್ಯಾಂಡ್→ಡ. ಫಿನ್‌ಲೆಂಡ್
ಇ. ಐಸ್ ಲ್ಯಾಂಡ್

10. ಚಿತ್ತಾಕರ್ಷಕ ಕಡಲ ತೀರವೊಂದರ ದೃಶ್ಯ ಚಿತ್ರ-11ರಲ್ಲಿದೆ. ನಮ್ಮ ರಾಷ್ಟ್ರದ ಕೆಲವೇ ರಾಜ್ಯಗಳು ಸಾಗರ ತೀರ ಹೊಂದಿವೆ - ಹೌದಲ್ಲ? ಕೆಳಗಿನ ಪಟ್ಟಿಯಲ್ಲಿರುವ ಯಾವ ರಾಜ್ಯಗಳು ಸಾಗರ ತೀರ ಹೊಂದಿಲ್ಲ?
ಅ. ಕರ್ನಾಟಕ→ಬ. ಒಡಿಶಾ
ಕ. ಅಸ್ಸಾಂ→→ಡ. ಉತ್ತರಾಖಂಡ್
ಇ. ಗುಜರಾತ್→ಈ. ತೆಲಂಗಾಣ
ಉ. ಪಶ್ಚಿಮ ಬಂಗಾಳ→ಟ. ಪಂಜಾಬ್ 

11. ಚಿತ್ರ-12ರಲ್ಲಿರುವ ಭೂಪಟ ಗಮನಿಸಿ. ಇಲ್ಲಿ ಹೆಸರಿಸಿರುವ ಯಾವ ಭೂ ಭಾಗಗಳನ್ನು ಈ ಭೂಪಟದಲ್ಲಿ ಕಾಣಬಹುದು?
ಅ. ಭಾರತ→ಬ. ಮ್ಯಾನ್ಮಾರ್ (ಬರ್ಮಾ)
ಕ. ಆಸ್ಟ್ರೇಲಿಯಾ ಡ. ಹಿಂದೂ ಮಹಾಸಾಗರ
ಇ. ಮಡಗಾಸ್ಕರ್
ಈ. ಮೆಡಿಟರೇನಿಯನ್ ಸಮುದ್ರ ಉ. ಶ್ರೀಲಂಕಾ

12. ವಿಶ್ವ ಪ್ರಸಿದ್ಧ ‘ಅರಿಜೋನಾ ಮರುಭೂಮಿ’ಯ ಅಷ್ಟೇ ಪ್ರಸಿದ್ಧ ಹೇರಳ ನೈಸರ್ಗಿಕ ಶಿಲಾ ಶಿಲ್ಪಗಳಲ್ಲೊಂದು ಚಿತ್ರ-13ರಲ್ಲಿದೆ.
ಅ. ಈ ಮರುಭೂಮಿ ಯಾವ ಭೂಖಂಡದ ಯಾವ ರಾಷ್ಟ್ರದಲ್ಲಿದೆ?
ಬ. ನಮ್ಮ ದೇಶದಲ್ಲಿರುವ ಮರುಭೂಮಿಯ ಹೆಸರೇನು?

13. ಸಿಂಧೂ ಕಣಿವೆಯ ನಾಗರಿಕತೆಯ ಒಂದು ಪ್ರಸಿದ್ಧ ನಗರ ಮೊಹೆಂಜೊದಾರೋಗೆ ಸೇರಿದ ಒಂದು ವಿಖ್ಯಾತ ಅವಶೇಷ ಚಿತ್ರ-14ರಲ್ಲಿದೆ. ಅವಶೇಷ ರೂಪದಲ್ಲೇ ಇರುವ ಮೊಹೆಂಜೊದಾರೋ ನಗರ ಪ್ರಸ್ತುತ ಯಾವ ರಾಷ್ಟ್ರದಲ್ಲಿದೆ?
ಅ. ಭಾರತ→ ಬ. ಬಾಂಗ್ಲಾದೇಶ
ಕ. ಪಾಕಿಸ್ತಾನ ಡ. ಆಫ್ಘಾನಿಸ್ತಾನ ಇ. ನೇಪಾಳ

ಉತ್ತರಗಳು
1. ಬ ಮತ್ತು ಇ ಬಿಟ್ಟು ಇನ್ನೆಲ್ಲ
2. ಕ - ಮಧ್ಯ ಆಫ್ರಿಕಾ
3. ಅ- ಅಂಟಾರ್ಕ್ಟಿಕಾ; ಬ - ಮುಸುಕಿರುವ ಹಿಮ ರಾಶಿ ಮತ್ತು ಪೆಂಗ್ವಿನ್‌ಗಳ ಅಸ್ತಿತ್ವ
4. ಡ - ದಕ್ಷಿಣ ಪೆಸಿಫಿಕ್ ಸಾಗರ
5. ಬ - ಯೂರೋಪ್
6. 1- ಡ; 2 - ಕ; 3 - ಅ; 4 - ಇ; 5 - ಬ
7. ಕ - ಇಂಕಾ ನಾಗರಿಕತೆ
8. ಕ, ಇ ಮತ್ತು ಈ
9. ಅ - ನಾರ್ವೆ
10. ಕ, ಡ, ಈ ಮತ್ತು ಟ
11. ಅ, ಬ, ಡ ಮತ್ತು ಉ
12. ಅ. ಉತ್ತರ ಅಮೆರಿಕ ಖಂಡದ ಯು.ಎಸ್.ಎ ರಾಷ್ಟ್ರ
ಬ. ಥಾರ್ ಮರುಭೂಮಿ
13. ಕ - ಪಾಕಿಸ್ತಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT