ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಆ್ಯಂಡ್ರಿಯಾ ಡಿಸೋಜಾಗೆ ಪ್ರಶಸ್ತಿ

Last Updated 2 ಅಕ್ಟೋಬರ್ 2018, 16:15 IST
ಅಕ್ಷರ ಗಾತ್ರ

ಮೈಸೂರು: ಮಂಗಳೂರಿನ ಆ್ಯಂಡ್ರಿಯಾ ಎಲ್‌.ಡಿಸೋಜಾ ಇಲ್ಲಿ ಮಂಗಳವಾರ ಕೊನೆಗೊಂಡ ರಾಜ್ಯ ಮಹಿಳಾ ಚೆಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಮೈಸೂರು ಚೆಸ್‌ ಸೆಂಟರ್‌ ವತಿಯಿಂದ ನಡೆದ ಟೂರ್ನಿಯಲ್ಲಿ ಅವರು ಆರು ಪಾಯಿಂಟ್‌ ಪಡೆದು ಈ ಸಾಧನೆ ಮಾಡಿದರು. ಅಂತಿಮ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಬೆಳ್ತಂಗಡಿಯ ಇಶಾ ಶರ್ಮಾಗೆ ಆಘಾತ ನೀಡಿದರು.

ಐದೂವರೆ ಪಾಯಿಂಟ್‌ ಪಡೆದ ಇಶಾ ಮೊದಲ ರನ್ನರ್‌ ಅಪ್‌ ಪ್ರಶಸ್ತಿ ಪಡೆದರು. ಇಷ್ಟೇ ಪಾಯಿಂಟ್‌ ಗಳಿಸಿದ ಬೆಂಗಳೂರಿನ ಸಂಜನಾ ರಘುನಾಥ್‌ ದ್ವಿತೀಯ ರನ್ನರ್‌ ಅಪ್‌ ಪ್ರಶಸ್ತಿಗೆ ಭಾಜನರಾದರು. ಉಡುಪಿಯ ಮಹಿಮಾ ಶೆರಿಗಾರ್ (5ಪಾಯಿಂಟ್‌) ನಾಲ್ಕನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT