ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಎಚ್‌ ಅಧ್ಯಕ್ಷ ಹುದ್ದೆಗೆ ಎರಡನೇ ಅವಧಿಗೆ ಸ್ಪರ್ಧಿಸಲಿರುವ ಬಾತ್ರಾ

Last Updated 20 ಫೆಬ್ರುವರಿ 2021, 14:02 IST
ಅಕ್ಷರ ಗಾತ್ರ

ನವದೆಹಲಿ: ಹಾಲಿ ಅಧ್ಯಕ್ಷ, ಭಾರತದ ನರಿಂದರ್ ಬಾತ್ರಾ ಅವರು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ಗೆ (ಎಫ್‌ಐಎಚ್‌) ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಫೆಡರೇಷನ್‌ನ ಆಡಳಿತ ಮಂಡಳಿಯ ಚುನಾವಣೆಯು ಈ ವರ್ಷದ ಮೇಯಲ್ಲಿ ನಿಗದಿಯಾಗಿದೆ.

2016ರಿಂದ ಎಫ್‌ಐಎಚ್ ಅಧ್ಯಕ್ಷರಾಗಿರುವ ಬಾತ್ರಾ, ಮುಂದಿನ ಅವಧಿಗೂ ಸ್ಪರ್ಧಿಸುವುದಾಗಿ ಫೆ.18ರಂದು ಎಫ್‌ಐಎಚ್ ಕಾಂಗ್ರೆಸ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘2016ರಲ್ಲಿ ನನ್ನಲ್ಲಿ ವಿಶ್ವಾಸವಿಟ್ಟು ಎಫ್ಐಎಚ್‌ನ 12ನೇ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೀರಿ. ನಾಲ್ಕು ವರ್ಷಗಳ ಅವಧಿಯಲ್ಲಿ ಫೆಡರೇಷನ್‌ನ ಉದ್ದೇಶ, ಗುರಿಗಳನ್ನು ಸಾಧಿಸಲು ಹಾಗೂ ಹಾಕಿ ಕ್ರೀಡೆಯ ಅಭಿವೃದ್ಧಿಗಾಗಿ ನನ್ನ ಶಕ್ತಿಯನ್ನು ವ್ಯಯಿಸಿದ್ದೇನೆ. ಮುಂದಿನ ಅವಧಿಗೂ ಸ್ಪರ್ಧಿಸಲಿದ್ದೇನೆ‘ ಎಂದು ಭಾರತ ಒಲಿಂಪಿಕ್‌ ಸಮಿತಿಯ ಅಧ್ಯಕ್ಷ ಹಾಗೂ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರೂ ಆಗಿರುವ ಬಾತ್ರಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಫೆಬ್ರುವರಿ 12ರಿಂದಲೇ ಆರಂಭವಾಗಿದೆ. ಮಾರ್ಚ್‌ 12 ಕೊನೆಯ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT