ಹಾಕಿ ಇಂಡಿಯಾ ಅಧ್ಯಕ್ಷರಾಗಿ ಮುಷ್ತಾಕ್‌ ಆಯ್ಕೆ

7

ಹಾಕಿ ಇಂಡಿಯಾ ಅಧ್ಯಕ್ಷರಾಗಿ ಮುಷ್ತಾಕ್‌ ಆಯ್ಕೆ

Published:
Updated:
Deccan Herald

ನವದೆಹಲಿ: ಮೊಹಮ್ಮದ್‌ ಮುಷ್ತಾಕ್‌ ಅಹ್ಮದ್‌ ಅವರು ಹಾಕಿ ಇಂಡಿಯಾದ (ಎಚ್‌ಐ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸೋಮವಾರ ನಡೆದ ಹಾಕಿ ಇಂಡಿಯಾದ ಎಂಟನೇ ಕಾಂಗ್ರೆಸ್‌ನಲ್ಲಿ ಅಹ್ಮದ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಹ್ಮದ್‌ ಅವರು ಹಿಂದಿನ ಅವಧಿಯಲ್ಲಿ ಮಹಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.

ಮಣಿಪುರ ಹಾಕಿಯ (ಎಂಎಚ್‌) ಜ್ಞಾನೇಂದ್ರೊ ನಿಂಗೊಂಬಮ್‌ ಅವರು ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಕಿ ಜಮ್ಮು ಮತ್ತು ಕಾಶ್ಮೀರದ ಆಶಿಮಾ ಅಲಿ ಹಾಗೂ ಹಾಕಿ ಜಾರ್ಖಂಡ್‌ನ ಭೋಲನಾಥ್‌ ಸಿಂಗ್‌ ಅವರು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಹಾಕಿ ಜಮ್ಮು ಮತ್ತು ಕಾಶ್ಮೀರದ ರಾಜಿಂದರ್‌ ಸಿಂಗ್‌ ಅವರು ಮಹಾ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದಾರೆ. ಹಾಕಿ ಅಸ್ಸಾಂನ ತಾಪನ್‌ ಕುಮಾರ್‌ ದಾಸ್‌ ಅವರು  ಖಜಾಂಚಿಯಾಗಿ ಮರು ಆಯ್ಕೆಯಾಗಿದ್ದಾರೆ.

ಹಿರಿಯ ಆಟಗಾರ್ತಿ ಅಶುಂತಾ ಲಾಕ್ರಾ ಮತ್ತು ಛತ್ತೀಸಗಡ ಹಾಕಿಯ ಫಿರೋಜ್‌ ಅನ್ಸಾರಿ ಅವರು ಜಂಟಿ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಹಾಕಿ ಕರ್ನಾಟಕದ ಹಾಲಿ ಅಧ್ಯಕ್ಷ ಎಸ್‌.ವಿ.ಎಸ್‌.ಸುಬ್ರಮಣ್ಯ ಗುಪ್ತಾ, ಹಾಕಿ ರಾಜಸ್ಥಾನದ ಆರತಿ ಸಿಂಗ್‌, ಹಾಕಿ ತಮಿಳುನಾಡಿನ ಎಂ.ರೇಣುಕಾ ಲಕ್ಷ್ಮಿ ಅವರು ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆರ್‌.ಪಿ.ಸಿಂಗ್‌ ಮತ್ತು ಜಾಯ್‌ದೀಪ್‌ ಕೌರ್‌ ಅವರು ಮತ್ತೊಂದು ಅವಧಿಗೆ ಅಥ್ಲೀಟ್‌ಗಳ ಪ್ರತಿನಿಧಿಗಳಾಗಿ ಕೆಲಸ ಮಾಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !