ಹಾಕಿ:: ಐದನೇ ಸ್ಥಾನದಲ್ಲಿ ಭಾರತ ತಂಡ

7

ಹಾಕಿ:: ಐದನೇ ಸ್ಥಾನದಲ್ಲಿ ಭಾರತ ತಂಡ

Published:
Updated:

ನವದೆಹಲಿ : ಭಾರತ ಪುರುಷರ ಹಾಕಿ ತಂಡವು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಮಂಗಳವಾರ ಬಿಡುಗಡೆ ಮಾಡಿರುವ ವಿಶ್ರಕ್ರಮಾಂಕ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದೆ. 

ಇತ್ತೀಚೆಗೆ ನಡೆದ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಹಣಾಹಣಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ತಂಡದ ಎದುರು ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತ್ತು. ಇದರಿಂದಾಗಿ ಭಾರತ ತಂಡವು ಒಂದು ಸ್ಥಾನ ಬಡ್ತಿ ಹೊಂದಿದೆ. 

ಭಾರತ ತಂಡವು ತನ್ನ ಖಾತೆಯಲ್ಲಿ ಒಟ್ಟು 1484 ಪಾಯಿಂಟ್ಸ್‌ ಹೊಂದಿದೆ. ಇತ್ತೀಚೆಗೆ ನ್ಯೂಜಿಲೆಂಡ್‌ ವಿರುದ್ಧ ನಡೆದ ಹಾಕಿ ಟೆಸ್ಟ್‌ ಸರಣಿಯಲ್ಲಿ ಭಾರತವು ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿತ್ತು. 

ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವು ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಅದು ಒಟ್ಟು 1906 ಪಾಯಿಂಟ್ಸ್‌ಗಳನ್ನು ಹೊಂದಿದೆ. 1883 ಪಾಯಿಂಟ್ಸ್‌ಗಳೊಂದಿಗೆ ಅರ್ಜೆಂಟೀನಾ ತಂಡವು ಎರಡನೇ ಸ್ಥಾನದಲ್ಲಿದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಬೆಲ್ಜಿಯಂ ಹಾಗೂ ನೆದರ್ಲೆಂಡ್ಸ್‌ ತಂಡಗಳಿವೆ. 

ಏಷ್ಯಾದ ಇನ್ನೊಂದು ಪ್ರಮುಖ ತಂಡ ಮಲೇಷ್ಯಾವು 12ನೇ ಸ್ಥಾನದಲ್ಲಿದೆ. 

ಮಹಿಳಾ ಹಾಕಿ ವಿಶ್ವಕ್ರಮಾಂಕ ಪಟ್ಟಿಯಲ್ಲೂ ಭಾರತ ತಂಡವು ಒಂದು ಸ್ಥಾನ ಬಡ್ತಿ ಪಡೆದಿದೆ. ಸದ್ಯ, ಅದು ಒಂಬತ್ತನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ವಿಶ್ವಚಾಂಪಿಯನ್‌ ನೆದರ್ಲೆಂಡ್ಸ್‌ ತಂಡವು ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ವಿಶ್ವಕಪ್‌ನಲ್ಲಿ ರನ್ನರ್‌ ಅಪ್‌ ಆಗಿದ್ದ ಐರ್ಲೆಂಡ್‌ ತಂಡವು ಎಂಟನೇ ಸ್ಥಾನದಲ್ಲಿದೆ. ಅದು ಒಟ್ಟು ಎಂಟು ಸ್ಥಾನಗಳ ಪ್ರಗತಿ ಹೊಂದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !