ಟಿಟಿ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಕಿರಿಕಿರಿ

7

ಟಿಟಿ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಕಿರಿಕಿರಿ

Published:
Updated:

ನವದೆಹಲಿ:ಮಣಿಕಾ ಬಾತ್ರಾ ಒಳಗೊಂಡಂತೆ ಹಿರಿಯ ಟೇಬಲ್ ಟೆನಿಸ್ ಆಟಗಾರರು ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೇಚಿಗೆ ಸಿಲುಕಿಕೊಂಡರು.

ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಮಂಗಳವಾರ ಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತದ 17 ಮಂದಿ ಆಟಗಾರರು ಮತ್ತು ಅಧಿಕಾರಿಗಳು ತೆರಳಲು ಬೆಳಿಗ್ಗೆ ವಿಮಾನನಿಲ್ದಾಣಕ್ಕೆ ತೆರಳಿದ್ದರು. ಆದರೆ ಮಣಿಕಾ ಬಾತ್ರಾ ಮತ್ತು ಮೌಮಾ ದಾಸ್ ಸೇರಿ ಏಳು ಮಂದಿಯನ್ನು ವಿಮಾನ ಏರಲು ಸಿಬ್ಬಂದಿ ಅನುವು ಮಾಡಲಿಲ್ಲ.

ಆಟಗಾರರು ವಿಭಿನ್ನ ಪಿಎನ್‌ಆರ್ ಸಂಖ್ಕೆ ಹೊಂದಿರುವ ಟಿಕೆಟ್ ಇರಿಸಿಕೊಂಡಿದ್ದಾರೆ ಮತ್ತು ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದರು. ತಕ್ಷಣ ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯವನ್ನು ಬಹಿರಂಗ ಮಾಡಿದ ಮಣಿಕಾ ಬಾತ್ರಾ ಅವರು ಕ್ರೀಡಾ ಸಚಿವರು ಮತ್ತು ಪ್ರಧಾನಿ ಕಚೇರಿ ಇದಕ್ಕೆ ಪರಿಹಾರ ಸೂಚಿಸಬೇಕು ಎಂದು ಆಗ್ರಹಿಸಿದರು.

ವಿಷಯ ಗಂಭೀರವಾಗುತ್ತಿದ್ದಂತೆ ಹೇಳಿಕೆ ನೀಡಿದ ಏರ್ ಇಂಡಿಯಾ ‘ನಮ್ಮ ಸಂಸ್ಥೆ ಕ್ರೀಡಾಪಟುಗಳನ್ನು ಗೌರವಿಸುತ್ತದೆ. ಆದರೆ ಟೇಬಲ್ ಟೆನಿಸ್ ಟೂರ್ನಿಗೆ ತೆರಳುವ ಏಳು ಮಂದಿಯ ಹೆಸರನ್ನು ಹೆಚ್ಚುವರಿಯಾಗಿ ಸೇರಿಸಿದ್ದರಿಂದ ಸಮಸ್ಯೆಯಾಗಿದೆ’ ಎಂದು ತಿಳಿಸಿತು. ರಾತ್ರಿ ತೆರಳುವ ವಿಮಾನದಲ್ಲಿ ತೆರಳಲು ಅವಕಾಶ ಮಾಡಿಕೊಟ್ಟಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !