ಭಾನುವಾರ, ಡಿಸೆಂಬರ್ 8, 2019
20 °C

ಫೆಡರೇಷನ್ ಕಪ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ರಾಜ್ಯದ ಸುಪ್ರಿಯಾಗೆ ಚಿನ್ನ

Published:
Updated:
Prajavani

ಪಟಿಯಾಲ: ಕರ್ನಾಟಕದ ಸುಪ್ರಿಯಾ ಇಲ್ಲಿ ಶುಕ್ರವಾರ ಆರಂಭ ಗೊಂಡ ಫೆಡರೇಷನ್ ಕಪ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪನ್‌ ಮಹಿಳೆಯರ ಹೈಜಂಪ್‌ನಲ್ಲಿ ಚಿನ್ನ ಗೆದ್ದರು. ಹರಿ ಯಾಣದ ರುಬೀನಾ ಯಾದವ್ ಕೂಡ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

18 ವರ್ಷದ ಸುಪ್ರಿಯಾ ಮತ್ತು ರುಬೀನಾ ಯಾದವ್‌ ಒಟ್ಟಾಗಿ 1.78 ಮೀಟರ್ಸ್‌ ಎತ್ತರದ ಸಾಧನೆ ಮಾಡಿ ದರು. ಕರ್ನಾಟಕದ ಅಭಿನಯ ಶೆಟ್ಟಿ (1.75 ಮೀಟರ್ಸ್) ಕಂಚಿನ ಪದಕ ಗೆದ್ದರು.

ಫಲಿತಾಂಶಗಳು: ಪುರುಷರ 5000 ಮೀಟರ್ಸ್ ಓಟ: ಗವಿತ್ ಮುರಳಿ (ಗುಜರಾತ್‌). 13ನಿ, 56.62 ಸೆ–1, ಅಭಿಷೇಕ್‌ ಪಾಲ್ (ಉತ್ತರ ಪ್ರದೇಶ)–2, ಕಿಸಾನ್‌ ತಾಡವಿ (ಮಹಾರಾಷ್ಟ್ರ)–3; ಪೋಲ್‌ವಾಲ್ಟ್‌: ಎಸ್‌.ಶಿವ (ತಮಿಳುನಾಡು) 5.16 ಮೀ–1, ಧೀರೇಂದ್ರ ಕುಮಾರ್‌–2, ಬಿನೀಶ್‌ ಜೇಕಬ್‌ (ಕೇರಳ)–3.

ಮಹಿಳೆಯರ 5000 ಮೀಟರ್ಸ್‌ ಓಟ: ಪಾರುಲ್‌ ಚೌಧರಿ (ಉತ್ತರಪ್ರದೇಶ) 15ನಿ, 58.35ಸೆ–1, ಎಲ್‌.ಸೂರ್ಯಾ (ತಮಿಳುನಾಡು)–2, ಸಂಜೀವಿನಿ ಜಾಧವ್‌ (ಮಹಾರಾಷ್ಟ್ರ)–3. ಹೈಜಂಪ್‌: ಸುಪ್ರಿಯಾ ಎಸ್‌.ಬಿ (ಕರ್ನಾಟಕ) 1.78 ಮೀ–1, ರುಬೀನಾ ಯಾದವ್‌ (ಹರಿಯಾಣ)–2, ಅಭಿನಯ ಶೆಟ್ಟಿ (ಕರ್ನಾಟಕ)–3;

ಡಿಸ್ಕಸ್‌ ಥ್ರೋ: ಕಮಲ್‌ಪ್ರೀತ್‌ ಕೌರ್‌ (ಪಂಜಾಬ್‌) 60.25 ಮೀ–1, ನವಜೀತ್‌ ಕೌರ್ ಧಿಲೋನ್‌ (ಪಂಜಾಬ್‌)–2, ಸೌರವಿ ಬಿಸ್ವಾಸ್‌–3; ಹ್ಯಾಮರ್ ಥ್ರೋ: ಅನಿತಾ (ನವದೆಹಲಿ) 59.43 ಮೀ–1, ಜ್ಯೋತಿ ರಾಣಾ (ಹರಿಯಾಣ)–2, ಪೂನಮ್‌ ದೇವಿ (ಹರಿಯಾಣ)–3.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು