ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಒಲಿಂಪಿಕ್ಸ್‌: ಭಾರತ ತಂಡದ ಮ್ಯಾನೇಜರ್‌ ವಾನಿಗೆ ಕೋವಿಡ್‌

Last Updated 2 ಫೆಬ್ರುವರಿ 2022, 10:45 IST
ಅಕ್ಷರ ಗಾತ್ರ

ಬೀಜಿಂಗ್‌: ಚಳಿಗಾಲದಒಲಿಂಪಿಕ್‌ ಕೂಟಕ್ಕೆ ಬೀಜಿಂಗ್‌ಗೆ ತೆರಳಿರುವ ಭಾರತ ತಂಡದ ಮ್ಯಾನೇಜರ್ ಮೊಹಮ್ಮದ್ ಅಬ್ಬಾಸ್ ವಾನಿ ಅವರಿಗೆ ಕೋವಿಡ್‌ ಖಚಿತಪಟ್ಟಿದೆ.

ಕಾಶ್ಮೀರದ ಸ್ಕೀಯಿಂಗ್ ಪಟು ಆರಿಫ್‌ ಖಾನ್‌ ಅವರು ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಏಕೈಕ ಅಥ್ಲೀಟ್ ಆಗಿದ್ದಾರೆ. ಅವರು ಸೇರಿ ಆರು ಮಂದಿಯ ತಂಡವು ಸೋಮವಾರ ರಾತ್ರಿ ಬೀಜಿಂಗ್‌ಗೆ ಪ್ರಯಾಣ ಬೆಳೆಸಿತ್ತು.

ಚೆಫ್‌ ಡಿ ಮಿಶನ್ ಹರ್ಜಿಂದರ್‌ ಸಿಂಗ್‌, ಕೋಚ್‌ ಲೂದರ್‌ ಚಂದ್‌ ಠಾಕೂರ್‌, ತಂತ್ರಜ್ಞ ಪೂರನ್ ಚಂದ್‌ ಮತ್ತು ಅಧಿಕಾರಿ ರೂಪ್ ಚಂದ್ ನೇಗಿ ಭಾರತ ತಂಡದಲ್ಲಿರುವ ಇನ್ನುಳಿದ ಸದಸ್ಯರು.

ಅಬ್ಬಾಸ್ ವಾನಿ ಅವರಿಗೆ ಕೋವಿಡ್ ದೃಢಪಟ್ಟಿದ್ದರ ಕುರಿತು ಭಾರತಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ ಮಾಹಿತಿ ನೀಡಿದ್ದಾರೆ. ವಾನಿ ಅವರ ಮರುಪರೀಕ್ಷೆಯ ಕುರಿತು ಚೆಫ್ ಡಿ ಮಿಷನ್ ಹರ್ಜಿಂದರ್ ಅವರು ಟೂರ್ನಿಯ ಆಯೋಜಕರೊಂದಿಗೆ ಚರ್ಚಿಸಿದ್ದಾರೆ‘ ಎಂದು ಹೇಳಿದ್ದಾರೆ.

ಅಥ್ಲೀಟ್ ಅರಿಫ್ ಖಾನ್‌ ಮತ್ತು ಕೋಚ್‌ ಅವರನ್ನು ಬೇರೆ ಕೊಠಡಿಗೆ ತೆರಳಲು ಸೂಚಿಸಲಾಗಿದೆ ಎಂದು ಬಾತ್ರಾ ಹೇಳಿದ್ದಾರೆ.

ಇದೇ 4ರಿಂದ 20ರವರೆಗೆ ಚಳಿಗಾಲದ ಒಲಿಂಪಿಕ್ಸ್ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT