ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫ್ಲೈಯಿಂಗ್ ಸಿಖ್’ ಮಿಲ್ಖಾ ಬದುಕಿಗೆ ಕೊಳ್ಳಿ ಇಟ್ಟ ಕೋವಿಡ್

Last Updated 19 ಜೂನ್ 2021, 2:43 IST
ಅಕ್ಷರ ಗಾತ್ರ

ಚಂಡೀಗಡ: ಫ್ಲೈಯಿಂಗ್ ಸಿಖ್ ಖ್ಯಾತಿಯ, ಒಲಿಂಪಿಯನ್ ಅಥ್ಲೀಟ್ ಮಿಲ್ಖಾ ಸಿಂಗ್ ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದರು.

ಸ್ವಾತಂತ್ರ್ಯನಂತರದ ಭಾರತದ ಕ್ರೀಡಾರಂಗದ ಬೆಳವಣಿಗೆಯ ಹರಿಕಾರರಲ್ಲಿ ಒಬ್ಬರಾಗಿದ್ದ ಒಲಿಂಪಿ ಯನ್ ಮಿಲ್ಖಾ, ಕೋವಿಡ್‌ನಿಂದಾಗಿ ಹೋದ ತಿಂಗಳು ಮೊಹಾಲಿಯ ಫೋರ್ಟಿಸ್‌ ನಲ್ಲಿ ದಾಖಲಾಗಿದ್ದರು. ಒಂದು ವಾರ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದರು. ಮನೆಗೂ ಮರಳಿದ್ದರು. ಆದರೆ ಜೂನ್ 3ರಂದು ಅವರಿಗೆ ಉಸಿರಾಟದ ತೊಂದರೆ ಹೆಚ್ಚಾಗಿದ್ದರಿಂದ ಚಂಡೀಗಡದ ಪಿಜಿಐಎಂಇಆರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದ ಅವರನ್ನು ಮಂಗಳವಾರದಂದು ಐಸಿಯುನಿಂದ ವಿಶೇಷ ವಾರ್ಡ್‌ಗೆಸ್ಥಳಾಂತರಿಸಲಾಗಿತ್ತು. ಆದರೆ ಗುರುವಾರ ಅವರಿಗೆ ಜ್ವರ ಬಂದಿತ್ತು. ಉಸಿರಾಟದ ತೊಂದರೆಯೂ ಆಗಿತ್ತು. ಆದ್ದರಿಂದ ಮತ್ತೆ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಹೋದ ತಿಂಗಳು ಅವರ ಪತ್ನಿ ನಿರ್ಮಲ್ ಕೌರ್ ಕೂಡ ಕೋವಿಡ್‌ ಸೋಂಕಿಗೊಳಗಾಗಿ ಫೋರ್ಟಿಸ್‌ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹೋದ ಭಾನುವಾರವಷ್ಟೇ ನಿಧನರಾಗಿದ್ದರು.

1960ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ಸ್ ಓಟದಲ್ಲಿ ಫೈನಲ್ ತಲುಪಿದ್ದು ಅವರು ಐತಿಹಾಸಿಕ ಸಾಧನೆ. ಆ ಕೂಟದಲ್ಲಿ ಸ್ವಲ್ಪ ಅಂತರದಲ್ಲಿ ಪದಕ ಗಳಿಕೆ ಕೈತಪ್ಪಿತ್ತು.

1956 ಮತ್ತು 1964ರಒಲಿಂಪಿಕ್ಸ್‌ನಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದರು. 1958ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಬಾರಿ ಚಿನ್ನ ಗೆದ್ದ ಹೆಗ್ಗಳಿಕೆ ಅವರದ್ದು.

ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. ಪಂಜಾಬ್ ಸರ್ಕಾರದಲ್ಲಿ ಕ್ರೀಡಾ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಅವರ ಜೀವನಗಾಥೆಯ ‘ಭಾಗ್‌ ಮಿಲ್ಖಾ ಭಾಗ್‘ ಹಿಂದಿ ಚಲನಚಿತ್ರವು ಕೆಲವು ವರ್ಷಗಳ ಹಿಂದೆ ಭರ್ಜರಿಹಿಟ್ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT