ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌: ಮಹೇಶ್ವರಿಗೆ ಚಿನ್ನ

Last Updated 3 ಡಿಸೆಂಬರ್ 2018, 17:11 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದ ಮಹೇಶ್ವರಿ ಚೌಹಾಣ್‌ ಅವರು ರಾಷ್ಟ್ರೀಯ ಶಾಟ್‌ಗನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಸೋಮವಾರ ನಡೆದ ಮಹಿಳೆಯರ ಸ್ಕೀಟ್‌ ವಿಭಾಗದ ಫೈನಲ್‌ನಲ್ಲಿ ಮಹೇಶ್ವರಿ 52–51 ಪಾಯಿಂಟ್ಸ್‌ನಿಂದ ಪಂಜಾಬ್‌ನ ಗಣೇಮತ್‌ ಶೇಕೊನ್‌ ಅವರನ್ನು ಸೋಲಿಸಿದರು.

ಪಂಜಾಬ್‌ನ ಸಿಮ್ರನ್‌ಪ್ರೀತ್‌ ಕೌರ್‌ ಜೋಹಲ್‌ ಈ ವಿಭಾಗದ ಕಂಚಿನ ಪದಕ ಪಡೆದರು.

ತಂಡ ವಿಭಾಗದಲ್ಲಿ ಪಂಜಾಬ್‌ ಚಿನ್ನದ ಸಾಧನೆ ಮಾಡಿತು. ಸಿಮ್ರನ್‌, ಪರಿನಾಜ್‌ ಮತ್ತು ಗಣೇಮತ್‌ ಅವರಿದ್ದ ತಂಡ ಫೈನಲ್‌ನಲ್ಲಿ 342 ಪಾಯಿಂಟ್ಸ್‌ ಕಲೆಹಾಕಿತು. ರಾಜಸ್ಥಾನ (331) ಮತ್ತು ತೆಲಂಗಾಣ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಜಯಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT