ಭಾನುವಾರ, ಏಪ್ರಿಲ್ 2, 2023
33 °C

ಬಿಲಿಯರ್ಡ್ಸ್: ಪಂಕಜ್‌ಗೆ 11ನೇ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಂಕಜ್ ಅಡ್ವಾಣಿ 11ನೇ ಸಲ ರಾಷ್ಟ್ರೀಯ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದರು. 

ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಬಿಲಿಯರ್ಡ್ಸ್‌ ಫೈನಲ್‌ನಲ್ಲಿ ಬೆಂಗಳೂರಿನ ಪಂಕಜ್ 5–2 ರಿಂದ ತಾವು ಪ್ರತಿನಿಧಿಸುವ ಪಿಎಸ್‌ಪಿಬಿ ತಂಡದ ಸಹ ಆಟಗಾರ ಧ್ರುವ ಸಿತ್ವಾಲ್ ವಿರುದ್ಧ ಜಯಿಸಿದರು. 

ಸೋಮವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಸಿತ್ವಾಲ್ ಅವರ ಕಠಿಣ ಪೈಪೋಟಿಯನ್ನು ಎದುರಿಸಿದ ಪಂಕಜ್ ಮೇಲುಗೈ ಸಾಧಿಸಿದರು. 

ಆರಂಭಿಕ ಎರಡು ಫ್ರೇಮ್‌ಗಳಲ್ಲಿ ಇಬ್ಬರೂ ಸಮಬಲದ ಹೋರಾಟ ನಡೆಸಿದರು. ನಂತರದ ಪೈಪೋಟಿಯಲ್ಲಿ ಅನುಭವಿ ಪಂಕಜ್ ಮುನ್ನಡೆ ಸಾಧಿಸುತ್ತ ನಡೆದರು. 

‘ಧ್ರುವ ನನ್ನ ಆಪ್ತಮಿತ್ರ. ವೃತ್ತಿಜೀವನದಲ್ಲಿ ಇಬ್ಬರೂ ಹಲವು ಏಳು–ಬೀಳುಗಳನ್ನು ಕಂಡಿದ್ದೇವೆ. ಅತ್ಯಂತ ಆತ್ಮೀಯ ಮಿತ್ರನೆದುರು ಫೈನಲ್ ಪಂದ್ಯ ಆಡುವುದು ಕಠಿಣ ಸವಾಲು. ಸ್ನೂಕರ್‌ನಲ್ಲಿ ವೈಫಲ್ಯ ಅನುಭವಿಸಿದ ನಂತರದ ಈ ಗೆಲುವು ತೃಪ್ತಿ ತಂದಿದೆ’ ಎಂದು ಪಂಕಜ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು