ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿವಿಎಲ್: ಬ್ಲ್ಯಾಕ್‌ಹಾಕ್ಸ್‌ ಜಯಭೇರಿ

Last Updated 14 ಫೆಬ್ರುವರಿ 2022, 5:02 IST
ಅಕ್ಷರ ಗಾತ್ರ

ಹೈದರಾಬಾದ್: ಹೈದರಾಬಾದ್ ಬ್ಲ್ಯಾಕ್ ಹಾಕ್ಸ್‌ ತಂಡವು ಇಲ್ಲಿ ನಡೆಯುತ್ತಿರುವ ಪ್ರೈಮ್ ವಾಲಿಬಾಲ್ ಲೀಗ್‌ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ಗಚ್ಚಿಬೌಳಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬ್ಲ್ಯಾಕ್‌ ಹಾಕ್ಸ್‌ ತಂಡವು 15–14, 15–11, 15–14, 15–7, 15–13 ರಿಂದ ಚೆನ್ನೈ ಬ್ಲಿಟ್ಜ್‌ ತಂಡದ ಎದುರು ಜಯಿಸಿತು.

ಹೈದರಾಬಾದ್ ತಂಡದಲ್ಲಿ ಅಮೋಘವಾಗಿ ಆಡಿದ ಎಸ್‌.ವಿ. ಗುರುಪ್ರಶಾಂತ್ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ಚೆನ್ನೈ ತಂಡಕ್ಕೆ ನವೀನ್ ರಾಜಾ ಜೇಕಬ್ ಮತ್ತು ಬ್ರುನೊ ಡಿಸಿಲ್ವಾ ಅವರು ಉತ್ತಮ ಆರಂಭ ನೀಡಿದ್ದರು. 6–2ರ ಮುನ್ನಡೆ ಗಳಿಸಿತ್ತು. ಆದರೆ ಗುರು ಪ್ರಶಾಂತ್ ಅವರ ಚುರುಕಿನ ಆಟದಿಂದಾಗಿ ಹೈದರಾಬಾದ್ ಮುನ್ನಡೆ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT