ಪ್ರೊ ವಾಲಿಬಾಲ್‌: ಕ್ಯಾಲಿಕಟ್‌ ಹೀರೋಸ್‌ಗೆ ಜಯ

7

ಪ್ರೊ ವಾಲಿಬಾಲ್‌: ಕ್ಯಾಲಿಕಟ್‌ ಹೀರೋಸ್‌ಗೆ ಜಯ

Published:
Updated:

ಕೊಚ್ಚಿ: ಅಮೋಘ ಆಟ ಆಡಿದ ಕ್ಯಾಲಿಕಟ್‌ ಹೀರೋಸ್‌ ತಂಡದವರು ಪ್ರೊ ವಾಲಿಬಾಲ್‌ ಲೀಗ್‌ ಮೊದಲ ಆವೃತ್ತಿಯಲ್ಲಿ ಶುಭಾರಂಭ ಮಾಡಿದ್ದಾರೆ.

ರಾಜೀವ್‌ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕ್ಯಾಲಿಕಟ್‌ ಹೀರೋಸ್‌ 15–8, 15–8, 13–15, 15–11, 15–11ರಲ್ಲಿ ಚೆನ್ನೈ ಸ್ಪಾರ್ಟನ್ಸ್‌ ತಂಡವನ್ನು ಮಣಿಸಿತು. ಇದರೊಂದಿಗೆ ಒಟ್ಟು ಎರಡು ಪಾಯಿಂಟ್ಸ್‌ ಕಲೆಹಾಕಿ  ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಮೊದಲ ಸೆಟ್‌ನ ಶುರುವಿನಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ 7–7, 8–8 ಸಮಬಲ ಕಂಡುಬಂತು. ನಂತರ ಕ್ಯಾಲಿಕಟ್‌ ತಂಡ ಮೋಡಿ ಮಾಡಿತು. ಈ ತಂಡದ ಪಾಲ್‌ ಲಾಟ್ಮನ್‌, ನವೀನ್‌ ಕುಮಾರ್‌, ಎ.ಕಾರ್ತಿಕ್‌ ಆಕರ್ಷಕ ಸರ್ವ್ ಮತ್ತು ಬ್ಲಾಕ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

ಎರಡನೇ ಸೆಟ್‌ನ ಆರಂಭದಿಂದಲೇ ಕ್ಯಾಲಿಕಟ್‌ ತಂಡ ‍ಪಾರಮ್ಯ ಮೆರೆಯಿತು. ಅಜಿತ್‌ ಲಾಲ್‌, ಕಾರ್ತಿಕ್‌, ಲಾಟ್ಮನ್‌ ಮತ್ತು ನವೀನ್‌ ಅವರ ಜಾದೂ ಮುಂದುವರಿಯಿತು. ಆದರೆ ಮೂರನೇ ಸೆಟ್‌ನಲ್ಲಿ ಚೆನ್ನೈ ಸ್ಪಾರ್ಟನ್ಸ್‌ ತಿರುಗೇಟು ನೀಡಿ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿಕೊಂಡಿತು.

ಇದರಿಂದ ಕ್ಯಾಲಿಕಟ್‌ ಆಟಗಾರರು ಎದೆಗುಂದಲಿಲ್ಲ. ಈ ತಂಡದವರು ನಾಲ್ಕು ಮತ್ತು ಐದನೇ ಸೆಟ್‌ಗಳಲ್ಲಿ ಆಕರ್ಷಕ ಆಟ ಆಡಿದರು. ಈ ಮೂಲಕ ಕ್ಯಾಲಿಕಟ್‌ ಸುಲಭವಾಗಿ ಗೆಲುವಿನ ತೋರಣ ಕಟ್ಟಲು ನೆರವಾದರು.

ಇಂದಿನ ಪಂದ್ಯ

ಅಹಮದಾಬಾದ್‌ ಡಿಫೆಂಡರ್ಸ್‌–ಬ್ಲಾಕ್‌ ಹಾಕ್ಸ್‌ ಹೈದರಾಬಾದ್‌

ಆರಂಭ: ರಾತ್ರಿ 7.

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !