ಗುರುವಾರ , ಜನವರಿ 21, 2021
16 °C

ಮಹಿಳಾ ಪ್ರೊ ಟೂರ್‌ ಟೂರ್ನಿ: ಗಾಲ್ಫ್‌: ರಿಧಿಮಾಗೆ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ರಿಧಿಮಾ ದಿಲಾವರಿ ಅವರು ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌ ಟೂರ್ನಿಯಲ್ಲಿ ಶುಕ್ರವಾರ ಪ್ರಶಸ್ತಿಗೆ ಮುತ್ತಿಕ್ಕಿದರು. ಈ ವರ್ಷದಲ್ಲಿ ಅವರು ಗೆದ್ದ ಐದನೇ ಟ್ರೋಫಿ ಇದು.

ಇಲ್ಲಿನ ರಾಯಲ್‌ ಗಾಲ್ಫ್‌ ಕೋರ್ಸ್ ಮೈದಾನದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಅವರು ದೀಕ್ಷಾ ದಾಗರ್‌ ಅವರನ್ನು ಹಿಂದಿಕ್ಕಿದರು. ಈ ಜಯದೊಂದಿಗೆ ರಿಧಿಮಾ ಅವರು ವರ್ಷಾಂತ್ಯದಲ್ಲಿ ಹೀರೊ ವುಮೆನ್ಸ್ ಮೆರಿಟ್‌ ಕ್ರಮಾಂಕದಲ್ಲಿ ಎರಡನೇ ಸ್ಥಾನ ಗಳಿಸಿದರು.

ಮೊದಲ ಸ್ಥಾನವು ಗೌರಿಕಾ ಬಿಷ್ಣೊಯ್‌ ಅವರ ಪಾಲಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಈ ಟೂರ್ನಿಯ ಫೈನಲ್‌ ತಪ್ಪಿಸಿಕೊಂಡರೂ ಕ್ರಮಾಂಕದಲ್ಲಿ ಅಗ್ರಸ್ಥಾನವನ್ನು ಕಳೆದುಕೊಳ್ಳಲಿಲ್ಲ.

ಗೌರಿಕಾ ಬಹುಮಾನ ಮೊತ್ತವಾಗಿ ₹ 11 ಲಕ್ಷ 84 ಸಾವಿರ ತಮ್ಮದಾಗಿಸಿಕೊಂಡರೆ, ರಿಧಿಮಾ ಅವರು ₹ 11 ಲಕ್ಷ 9 ಸಾವಿರ ಜೇಬಿಗಿಳಿಸಿದರು. ಮೂರನೇ ಕ್ರಮಾಂಕ ಗಳಿಸಿದ ಅಮನ್‌ದೀಪ್‌ ಅವರು ₹ 10 ಲಕ್ಷ 55 ಸಾವಿರ ಬಹುಮಾನ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು