ಸೋಮವಾರ, ಜೂನ್ 21, 2021
24 °C

ಹಾಕಿ ದಿಗ್ಗಜರ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌–19ರಿಂದ ನಿಧನರಾದ ಮಾಜಿ ಹಾಕಿ ಆಟಗಾರರಾದ ಎಂ.ಕೆ.ಕೌಶಿಕ್ ಮತ್ತು ರವಿಂದರ್ ಪಾಲ್ ಸಿಂಗ್ ಅವರ ಕುಟುಂಬಕ್ಕೆ ತಲಾ ₹ ಐದು ಲಕ್ಷ ಮೊತ್ತವನ್ನು ಕೇಂದ್ರ ಸರ್ಕಾರ ಘೋಷಿಸಿದೆ. 1980ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿ ಕೌಶಿಕ್ ಮತ್ತು ರವಿಂದರ್ ಪಾಲ್ ಇದ್ದರು. ಕೌಶಿಕ್ ಅವರು ಭಾರತ ಪುರುಷ ಮತ್ತು ಮಹಿಳೆಯರ ತಂಡದ ಕೋಚ್ ಕೂಡ ಆಗಿದ್ದರು. 

‘ಭಾರತವು ಇಬ್ಬರು ಹಾಕಿ ದಿಗ್ಗಜರನ್ನು ಕಳೆದುಕೊಂಡಿದೆ. ಭಾರತದ ಕ್ರೀಡೆಗೆ ಅವರು ನೀಡಿರುವ ಕೊಡುಗೆಯನ್ನು ಮರೆಯಲು ಸಾಧ್ಯವೇ ಇಲ್ಲ’ ಎಂದು ಮೊತ್ತವನ್ನು ಘೋಷಿಸಿ ಮಾಡಿರುವ ಟ್ವೀಟ್‌ನಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.