ನಾಕೌಟ್ ಹಂತಕ್ಕೆ ಸಿಂಧು, ಸಮೀರ್‌

7
ಬ್ಯಾಡ್ಮಿಂಟನ್‌ ವಿಶ್ವ ಟೂರ್‌: ಬಿವೆನ್ ಜಾಂಗ್‌, ಕಂಟಫನ್‌ ವಾಂಗ್ಚಾರೆನ್‌ಗೆ ಸೋಲು

ನಾಕೌಟ್ ಹಂತಕ್ಕೆ ಸಿಂಧು, ಸಮೀರ್‌

Published:
Updated:
Deccan Herald

ಗುವಾಂಗ್ಜು: ಭಾರತದ ಪಿ.ವಿ.ಸಿಂಧು ಮತ್ತು ಸಮೀರ್ ವರ್ಮಾ, ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಬ್ಯಾಡ್ಮಿಂಟನ್‌ನ ನಾಕೌಟ್ ಹಂತ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಸಿಂಧು, ಚೀನಾದ ಬೆವೆನ್ ಜಾಂಗ್ ಎದುರು 21–9, 21–15ರಿಂದ ಗೆದ್ದರು. ‘ಬಿ’ ಗುಂಪಿನ ಪಂದ್ಯದಲ್ಲಿ ಸಮೀರ್‌, ಥಾಯ್ಲೆಂಡ್‌ನ ಕೆಂಟಫನ್‌ ವಾಂಗ್ಚಾರೆನ್‌ ಎದುರು 21–9, 21–18ರಿಂದ ಗೆದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಬಿವೆನ್ ಅವರನ್ನು 35 ನಿಮಿಷಗಳಲ್ಲಿ ಸಿಂಧು ಸೋಲಿಸಿದರು. ಮೊದಲ ಗೇಮ್‌ನಲ್ಲಿ 2–6ರಿಂದ ಹಿನ್ನಡೆ ಅನುಭವಿಸಿದ್ದ ಸಿಂಧು ನಂತರ ಪಾರಮ್ಯ ಮೆರೆದರು. ಈ ಮೂಲಕ ಸತತ ಮೂರನೇ ಪಂದ್ಯ ಗೆದ್ದ ಸಾಧನೆ ಮಾಡಿದರು.

ಸಮೀರ್‌ ಅಮೋಘ ಆಟ: ಸಮೀರ್‌ ವರ್ಮಾ ಅಮೋಘ ಆಟದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. 44 ನಿಮಿಷಗಳಲ್ಲಿ ಮುಕ್ತಾಯಗೊಂಡ ಪಂದ್ಯದ ಮೊದಲ ಗೇಮ್‌ನಲ್ಲಿ ಸಮೀರ್‌ ಸುಲಭ ಜಯ ಸಾಧಿಸಿದರು. ಎರಡನೇ ಗೇಮ್‌ನಲ್ಲಿ ಥಾಯ್ಲೆಂಡ್ ಆಟಗಾರ ತಿರುಗೇಟು ನೀಡಲು ಪ್ರಯತ್ನಿಸಿದರು. ಆದರೆ ಪಟ್ಟು ಬಿಡದ ಸಮೀರ್‌ ಗೆಲುವು ಸಾಧಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !