ಬುಧವಾರ, ಜೂನ್ 29, 2022
25 °C
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮಿಶ್ರ, ಮಹಿಳೆಯರ ಡಬಲ್ಸ್‌ನಲ್ಲಿ ಸೋಲು

ಶ್ರೀಕಾಂತ್ ವಾಕ್‌ ಓವರ್‌; ಬಾನ್ಸೊಡ್‌ಗೆ ನಿರಾಸೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕಾಕ್: ಕಳೆದ ವಾರ ಕೊನೆಗೊಂಡ ಥಾಮಸ್ ಕಪ್ ಟೂರ್ನಿಯಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಿದಂಬಿ ಶ್ರೀಕಾಂತ್ ಅವರು ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎದುರಾಳಿಗೆ ವಾಕ್ ಓವರ್ ಕೊಟ್ಟಿದ್ದಾರೆ.

ಗುರುವಾರ ಎರಡನೇ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್‌, ಐರ್ಲೆಂಡ್‌ನ ನಟ್ ಗುಯೆನ್ ವಿರುದ್ಧ ಆಡಬೇಕಾಗಿತ್ತು. ಆದರೆ ಎಂಟನೇ ಶ್ರೇಯಾಂಕದ ಶ್ರೀಕಾಂತ್ ಅಡದೇ ಇರಲು ನಿರ್ಧರಿಸಿದರು. ಇದಕ್ಕೆ ಕಾರಣ ತಿಳಿದು ಬಂದಿಲ್ಲ. ವಿಶ್ವ ಕ್ರಮಾಂಕದಲ್ಲಿ 11ನೇ ಸ್ಥಾನದಲ್ಲಿರುವ ಶ್ರೀಕಾಂತ್ ಮೊದಲ ಸುತ್ತಿನ ಹಣಾಹಣಿಯಲ್ಲಿ ಫ್ರಾನ್ಸ್‌ನ ಬ್ರೈಸ್ ಲೆವೆರ್ಡೆಜ್‌ ಅವರನ್ನು 18-21, 21-10, 21-16ರಲ್ಲಿ ಮಣಿಸಿದ್ದರು.

ಮಹಿಳೆಯರ ವಿಭಾಗದಲ್ಲಿ ಭಾರತದ ಮಾಳವಿಕ ಬಾನ್ಸೊಡ್ ನಿರಾಸೆ ಕಂಡರು. ಡೆನ್ಮಾರ್ಕ್‌ನ ಲಿನಿ ಕ್ರಿಸ್ಟೋಫರ್ಸನ್ ವಿರುದ್ಧ ಅವರು 21-16, 14-21, 14-21ರಲ್ಲಿ ಸೋತರು.

ಭಾರತದ ಮಿಶ್ರ ಡಬಲ್ಸ್ ಜೋಡಿ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಎರಡನೇ ಸುತ್ತಿನಲ್ಲಿ ಸೋತು ಹೊರಬಿದ್ದರು. ಮಲೇಷ್ಯಾದ ಗೊಹ್‌ ಸೂನ್ ಹುವಾತ್ ಮತ್ತು ಲಾಯ್‌ ಶೆವಾನ್ ಜೆಮಿ ವಿರುದ್ಧ ಅವರು 19-21, 20-22ರಲ್ಲಿ ಸೋತರು.

ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಭಟ್ ಮತ್ತು ಶಿಖಾ ಗೌತಮ್ 19-21, 6-21ರಲ್ಲಿ ಐದನೇ ಶ್ರೇಯಾಂಕದ ಮಯು ಮತ್ಸುಮಟೊ ಮತ್ತು ವಕಾನ ನಗಹರ ಅವರಿಗೆ ಮಣಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.