ಟಿ.ಟಿ: ಸಾನ್ವಿ, ದಿನೇಶ್‌ಗೆ ಪ್ರಶಸ್ತಿ

7
ಕಾಸ್ಮೊಸ್‌ ಕ್ಲಬ್‌ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್ ಟೂರ್ನಿ

ಟಿ.ಟಿ: ಸಾನ್ವಿ, ದಿನೇಶ್‌ಗೆ ಪ್ರಶಸ್ತಿ

Published:
Updated:
Deccan Herald

ಹುಬ್ಬಳ್ಳಿ: ಬೆಳಗಾವಿಯ ಸಾನ್ವಿ ಮಾಂಡೇಕರ್‌ ಮತ್ತು ಎಂಎಸ್‌ ಎಸ್‌ಟಿಟಿ ಅಕಾಡೆಮಿಯ ತೆಷಬ್‌ ದಿನೇಶ್‌, ಧಾರವಾಡದಲ್ಲಿ ಶುಕ್ರವಾರ ಆರಂಭವಾದ ಕಾಸ್ಮಸ್ ಕ್ಲಬ್‌ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿ ಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಬಾಲಕಿಯರ ಮಿನಿ ಕೆಡೆಟ್‌ ವಿಭಾಗದ ಫೈನಲ್‌ನಲ್ಲಿ ಬಿಟಿಟಿಎ ಕ್ಲಬ್‌ನ ಸಾನ್ವಿ 11–5, 11–9, 11–8ರಲ್ಲಿ ಬಿಟಿಟಿ ಅಕಾಡೆಮಿಯ ಆಯುಷಿ ಗೋಡ್ಸೆ ಎದುರು ಜಯಿಸಿದರು.

ಇದೇ ವಿಭಾಗದ ಬಾಲಕರ ಫೈನಲ್‌ ನಲ್ಲಿ ದಿನೇಶ್‌ 12–10, 10–12, 11–7, 11–9ರಲ್ಲಿ ಚೆಕ್‌ ಮೇಟ್‌ ಕ್ಲಬ್‌ನ ಶಶಾಂತ್‌ ರಾಮಸ್ವಾಮಿ ಎದುರು ಜಯ ಸಾಧಿಸಿದರು.

ಬಾಲಕಿಯರ ಕೆಡೆಟ್‌ ವಿಭಾಗದ ಫೈನಲ್‌ನಲ್ಲಿ ಬಿಎನ್‌ಎಂ ಕ್ಲಬ್‌ನ ಸಾನ್ವಿ ಪಂಡಿತ್‌ 11–8, 4–11, 11–8, 11–6ರಲ್ಲಿ ಸಾನ್ವಿ ಮಾಂಡೇಕರ್‌ ಅವರನ್ನು ಸೋಲಿಸಿ ಪ್ರಶಸ್ತಿ ಪಡೆದರು. ಸೆಮಿಫೈನಲ್‌ ಪಂದ್ಯಗಳಲ್ಲಿ ಸಾನ್ವಿ ಮಾಂಡೇಕರ್‌ 11–7, 11–8, 11–7 ರಲ್ಲಿ ಸಂಸ್ಕೃತಿ ಶಿವಪ್ರಸಾದ ಮೇಲೂ, ಸಾನ್ವಿ ಪಂಡಿತ್‌ 10–12, 11–3, 11–5, 12–10ರಲ್ಲಿ ನೀತಿ ಅಗರವಾಲ್‌ ವಿರುದ್ಧ ಜಯದ ನಗು ಚೆಲ್ಲಿದ್ದರು.

ಬಾಲಕರ ಕೆಡೆಟ್‌ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಎಸ್‌ಬಿಟಿಟಿಎ ಕ್ಲಬ್‌ನ ಕೆ. ಆಯುಷ್‌ 11–4, 11–9, 14–12ರಲ್ಲಿ ತಮ್ಮದೇ ಅಕಾಡೆಮಿಯ ಅಭಿನವ್‌ ಕೆ. ಮೂರ್ತಿ ಎದುರು ಜಯ ಸಾಧಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !