ಭಾನುವಾರ, ಜೂನ್ 26, 2022
22 °C

ನೀರಜ್ ಚೋಪ್ರಾ ಯೂಟ್ಯೂಬ್ ವಾಹಿನಿ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಅಥ್ಲೀಟ್ ನೀರಜ್ ಚೋಪ್ರಾ ಯೂಟ್ಯೂಬ್ ವಾಹಿನಿ ಆರಂಭವಾಗಿದೆ. 

ಈ ವಾಹಿನಿಯಲ್ಲಿ ನೀರಜ್ ಅವರ ಕ್ರೀಡೆ ಮತ್ತು ಫಿಟ್‌ನೆಸ್‌ ಕುರಿತ ವಿಡಿಯೊಗಳು ಪ್ರಸಾರವಾಗಲಿವೆ. ಭಾನುವಾರ ಈ ವಾಹಿನಿಯನ್ನು ಆರಂಭಿಸಲಾಯಿತು. 

‘ಜಾವೆಲಿನ್ ಥ್ರೋನಲ್ಲಿ ದಿಗ್ಗಜರಾಗಿರುವ ಅಂತರರಾಷ್ಟ್ರೀಯ ಅಥ್ಲೀಟ್‌ಗಳನ್ನು ಮೊದಲಿನಿಂದಲೂ ಯೂಟ್ಯೂಬ್‌ನಲ್ಲಿ ನೋಡಿದ್ದೇನೆ. ಅವರ ಹಾವಭಾವಗಳು ಮತ್ತು ಆಟದ ತಂತ್ರಗಳನ್ನು ಕಲಿತಿದ್ದೇನೆ. ತರಬೇತಿಯ ನಡುವೆ ಬಿಡುವು ಸಿಕ್ಕಾಗ ಯೂಟ್ಯೂಬ್‌ನ ಮನರಂಜನೆ ಕಾರ್ಯಕ್ರಮಗಳನ್ನೂ ನೋಡಿದ್ದೇನೆ. ಅದರಿಂದಾಗಿ ಈ ಮಾಧ್ಯಮದಲ್ಲಿ ವಾಹಿನಿ ಆರಂಭಿಸಲು ಸಂತಸವಾಗುತ್ತಿದೆ‘ ಎಂದು ನೀರಜ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು