ಮಂಗಳವಾರ, ಅಕ್ಟೋಬರ್ 15, 2019
26 °C

ಟಿಟಿ: ಶ್ರೀಕಾಂತ್, ಯಶಸ್ವಿನಿಗೆ ಪ್ರಶಸ್ತಿ

Published:
Updated:

ಬೆಂಗಳೂರು: ಶ್ರೀಕಾಂತ್ ಕಶ್ಯಪ್ ಮತ್ತು ಯಶಸ್ವಿನಿ ಘೋರ್ಪಡೆ ಇಲ್ಲಿ ನಡೆಯುತ್ತಿರುವ ಕೆನರಾ ಬ್ಯಾಂಕ್ ಕಪ್ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದರು.

ಶನಿವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಶ್ರೀಕಾಂತ್ 6–11, 12–14, 11–6, 11–9, 11–6, 11–5ರಲ್ಲಿ ಆಕಾಶ್ ಕೆ.ಜೆ ವಿರುದ್ಧ ಜಯ ಗಳಿಸಿದರು. ಯಶಸ್ವಿನಿ 9–11, 11–5, 8–11, 11–9, 11–5, 5–11, 11–7ರಲ್ಲಿ ಕರುಣಾ ಗಜೇಂದ್ರ ವಿರುದ್ಧ ಗೆಲುವು ಸಾಧಿಸಿದರು.

Post Comments (+)