ಶನಿವಾರ, ಡಿಸೆಂಬರ್ 7, 2019
21 °C

ಅಲ್ಟ್ರಾ ಮ್ಯಾರಥಾನ್‌: ಉಲ್ಲಾಸಗೆ ಕಂಚು

Published:
Updated:

ತೈಪೆ: ಅಲ್ಟ್ರಾ ಮ್ಯಾರಥಾನ್‌ನಲ್ಲಿ ಭಾರತಕ್ಕೆ ಮೊಟ್ಟಮೊದಲ ಪದಕ ಗೆದ್ದುಕೊಟ್ಟ ಸಾಧನೆಯನ್ನು ಉಲ್ಲಾಸ ನಾರಾಯಣ್ ಮಾಡಿದ್ದಾರೆ.

ಭಾನುವಾರ ಅಂತರರಾಷ್ಟ್ರೀಯ ಅಲ್ಟ್ರಾ ರನ್ನಿಂಗ್ ಅಸೋಸಿಯೇಷನ್ (ಐಎಯು) ಏರ್ಪಡಿಸಿದ್ದ  ಸ್ಪರ್ಧೆಯಲ್ಲಿ ಉಲ್ಲಾಸ್ 250 ಕಿ.ಮೀ ದೂರವನ್ನು ಕ್ರಮಿಸಿದರು. 253 ಕಿ.ಮೀ ಕ್ರಮಿಸಿದ ಜಪಾನಿನ ಯೊಶಿಹಿಕೊ ಇಷಿಕಾವಾ ಮತ್ತು 252 ಕಿ.ಮೀ ಓಡಿದ ನೊಬಯುಕಿ ತಕಾಹಶಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು.

ಭಾರತ ತಂಡದಲ್ಲಿ ಉಲ್ಲಾಸ ಅವರೊಂದಿಗೆ ಇದ್ದ ಸುನಿಲ್ ಶರ್ಮಾ (202 ಕಿ.ಮೀ), ಎಲ್. ಎಲ್. ಮೀನಾ (192 ಕಿ.ಮೀ) ಗಮನ ಸೆಳೆದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು