ಶನಿವಾರ, ಅಕ್ಟೋಬರ್ 24, 2020
22 °C

ಅಂತರರಾಷ್ಟ್ರೀಯ ಆನ್‌ಲೈನ್‌ ಶೂಟಿಂಗ್‌ನಲ್ಲಿ ವಿಷ್ಣುಗೆ ಚಿನ್ನದ ಪದಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ವಿಷ್ಣು ಶಿವರಾಜ್ ಪಾಂಡಿಯನ್‌ ಅವರು ಐದನೇ ಅಂತರರಾಷ್ಟ್ರೀಯ ಆನ್‌ಲೈನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕೂಟದ 10 ಮೀಟರ್‌ ಏರ್‌ ರೈಫಲ್‌ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು.

16 ವರ್ಷದ ವಿಷ್ಣು 251.4 ಪಾಯಿಂಟ್ಸ್ ಗಳಿಸಿದರು. ಎರಡು ಪಾಯಿಂಟ್‌ಗಳ ಅಂತರದಿಂದ ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ ಅವರಿಗೆ 630.8 ಪಾಯಿಂಟ್ಸ್ ಸಿಕ್ಕಿದ್ದವು.

ವಿಶ್ವದ 27ನೇ ಕ್ರಮಾಂಕದ ಶೂಟರ್‌ ಫ್ರಾನ್ಸ್‌ನ ಎಟಿಯನ್‌ ಗೆರ್ಮಾಂಡ್ ಎರಡನೇ ಸ್ಥಾನ ಗಳಿಸಿದರೆ, ಆಸ್ಟ್ರಿಯಾದ ಮಾರ್ಟಿನ್‌ ಸ್ಟ್ರೆಂಪಲ್‌ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಭಾರತದ ಇನ್ನೋರ್ವ ಶೂಟರ್‌ ಪ್ರತ್ಯೂಷ್‌ ಅಮನ್‌ ಬಾರಿಕ್ ಏಳನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು.

ಎರಡು ದಿನಗಳ ಈ ಚಾಂಪಿಯನ್‌ಷಿಪ್‌ನಲ್ಲಿ 15 ದೇಶಗಳ ಶೂಟರ್‌ಗಳು ಪಾಲ್ಗೊಂಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.