ಮಂಗಳವಾರ, ಅಕ್ಟೋಬರ್ 22, 2019
21 °C
ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದ ಅಮೆರಿಕ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ಭಾರತ ರಿಲೇ ತಂಡಕ್ಕೆ ಏಳನೇ ಸ್ಥಾನ

Published:
Updated:
Prajavani

ದೋಹಾ: ಭಾರತ ಮಿಕ್ಸೆಡ್‌ ತಂಡ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 4X400 ಮೀಟರ್‌ ರಿಲೇ ಸ್ಪರ್ಧೆಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇದು ಈ ಋತುವಿನಲ್ಲಿ ಭಾರತ ತಂಡದ ಶ್ರೇಷ್ಠ ಪ್ರಯತ್ನವಾಗಿದೆ.

ಮುಹಮ್ಮದ್‌ ಅನಾಸ್‌, ವಿ.ಕೆ.ವಿಸ್ಮಯಾ, ಜಿಸ್ನಾ ಮ್ಯಾಥ್ಯು ಹಾಗೂ ಟಾಮ್‌ ನಿರ್ಮಲ್‌ ನೋಹ್‌ ಅವರಿದ್ದ ತಂಡ ಭಾನುವಾರ 3 ನಿಮಿಷ 15.77 ಸೆಕೆಂಡುಗಳಲ್ಲಿ ನಿಗದಿತ ಗುರಿ ತಲುಪಿತು. ಫೈನಲ್ಸ್‌ನಲ್ಲಿ ಒಟ್ಟು ಎಂಟು ರಾಷ್ಟ್ರಗಳು ಸ್ಪರ್ಧಿಸಿದ್ದವು.

ಹೋದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಾಗ ಈ ತಂಡ 3 ನಿಮಿಷ 15.71 ಸೆಕೆಂಡುಗಳಲ್ಲಿ ಗುರಿ ಮುಟ್ಟಿತ್ತು.

4X400 ಮೀಟರ್‌ ರಿಲೇಯಲ್ಲಿ ಅಮೆರಿಕ ತಂಡ ಚಿನ್ನದ ಪದಕ ತನ್ನದಾಗಿಸಿಕೊಂಡಿತು. 3 ನಿಮಿಷ 9.34 ಸೆಕೆಂಡುಗಳಲ್ಲಿ ಅದು ಗುರಿ ತಲುಪಿತು. ಇದರೊಂದಿಗೆ ಈ ವಿಭಾಗದಲ್ಲಿ ತನ್ನದೇ ಹೆಸರಲ್ಲಿದ್ದ ವಿಶ್ವ ದಾಖಲೆಯನ್ನು ಸುಧಾರಿಸಿಕೊಂಡಿತು. ಇದೇ ಚಾಂಪಿಯನ್‌ಷಿಪ್‌ನ ಹೀಟ್‌ನಲ್ಲಿ ತಂಡ 3 ನಿಮಿಷ 12.42 ಸೆಕೆಂಡುಗಳಲ್ಲಿ ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಿತ್ತು. ಜಮೈಕಾ (3 ನಿಮಿಷ 11.78 ಸೆಕೆಂಡುಗಳು) ಹಾಗೂ ಬಹರೇನ್‌ (3 ನಿಮಿಷ, 11.82 ಸೆಕೆಂಡುಗಳು) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು.

ಹೀಟ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದ ಭಾರತ ತಂಡ, 3 ನಿಮಿಷ 16.14 ಸೆಕೆಂಡುಗಳೊಂದಿಗೆ ಫೈನಲ್ಸ್‌ಗೆ ಅರ್ಹತೆ ಪಡೆದಿತ್ತು. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿಕೊಂಡಿತ್ತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)