ಗುರುವಾರ , ಅಕ್ಟೋಬರ್ 24, 2019
21 °C

ಕಬಡ್ಡಿ: ತವರಿನಲ್ಲಿ ಯೋಧಾ ಶುಭಾರಂಭ

Published:
Updated:
Prajavani

ನೋಯ್ಡಾ: ಮೋನು ಗೋಯತ್ (11;10 ಟಚ್ ಪಾಯಿಂಟ್ಸ್‌) ಮತ್ತು ಶ್ರೀಕಾಂತ್ ಜಾಧವ್ (9 ಪಾಯಿಂಟ್ಸ್‌) ಪ್ರಭಾವಿ ರೈಡಿಂಗ್ ಮೂಲಕವೂ ನಿತೇಶ್ ಕುಮಾರ್ –ಸುಮಿತ್ ಜೋಡಿ (ಕ್ರಮವಾಗಿ 6, 5 ಪಾಯಿಂಟ್ಸ್) ಅಮೋಘ ಟ್ಯಾಕ್ಲಿಂಗ್ ಮೂಲಕವೂ ಶಹೀದ್ ವಿಜಯ್‌ ಸಿಂಗ್ ಪಥಿಕ್ ಕ್ರೀಡಾಂಗಣದಲ್ಲಿ ಮಿಂಚಿದರು.

ಇವರ ಅಬ್ಬರದ ಆಟದಿಂದಾಗಿ ಯು.ಪಿ.ಯೋಧಾ ತಂಡ ‍ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಶನಿವಾರ ಭರ್ಜರಿ ಜಯ ಸಾಧಿಸಿತು. ದಬಾಂಗ್ ಡೆಲ್ಲಿ ತಂಡವನ್ನು 50–33ರಲ್ಲಿ ಮಣಿಸಿ ತವರಿನ ಅಂಗಣದ ಮೊದಲ ಪಂದ್ಯದಲ್ಲೇ ಜಯಭೇರಿ ಮೊಳಗಿಸಿತು.

ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಗಳಿಸಿರುವ ಮತ್ತು ಪಾಯಿಂಟ್‌ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಡೆಲ್ಲಿ ತಂಡ ನವೀನ್ ಕುಮಾರ್, ಜೋಗಿಂದರ್ ಸಿಂಗ್ ಮುಂತಾದವರಿಗೆ ವಿಶ್ರಾಂತಿ ನೀಡಿತ್ತು. ಇದು, ಯೋಧಾ ತಂಡದ ಹಾದಿಯನ್ನು ಸುಲಭ ಮಾಡಿತು. ಆರಂಭದ ಏಳನೇ ನಿಮಿಷದಲ್ಲೇ ಡೆಲ್ಲಿಯನ್ನು ಆಲೌಟ್ ಮಾಡಿದ ಯೋಧಾ ಒಟ್ಟು ಮೂರು ಬಾರಿ ಆ ತಂಡದ ಅಂಗಣವನ್ನು ಖಾಲಿ ಮಾಡಿತು.

ಡೆಲ್ಲಿಯ ನೀರಜ್ ನರ್ವಾಲ್ 11, ಸೋಮವೀರ್ ಮತ್ತು ಮೆರಾಜ್ ಶೇಕ್ ಕ್ರಮವಾಗಿ 9 ಮತ್ತು 8 ಪಾಯಿಂಟ್ ಗಳಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)