ಬ್ಯಾಡ್ಮಿಂಟನ್‌: ಭಾರತದ ಡಬಲ್‌ ಸಾಧನೆ

7

ಬ್ಯಾಡ್ಮಿಂಟನ್‌: ಭಾರತದ ಡಬಲ್‌ ಸಾಧನೆ

Published:
Updated:

ನವದೆಹಲಿ: ಸೌರಭ್‌ ಶರ್ಮಾ ಹಾಗೂ ಅನುಷ್ಕಾ ಪಾರಿಖ್‌ ಜೋಡಿಯು ಉಕ್ರೇನ್‌ನ ಖರ್ಕಿವ್‌ನಲ್ಲಿ ನಡೆಯುತ್ತಿರುವ ಆರ್‌ಎಸ್‌ಎಲ್‌ ಖರ್ಕಿವ್‌ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಚಾಲೆಂಜ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ. 

ಸೋಮವಾರ ನಡೆದ ಮಿಶ್ರ ವಿಭಾಗದ ಫೈನಲ್‌ ಪಂದ್ಯದಲ್ಲಿ ಈ ಜೋಡಿಯು 18–21, 21–19, 22–20ರಿಂದ ಪೊಲೆಂಡ್‌ನ ಪಾವೆಲ್‌ ಮಿಲೊವಸ್ಕಿ ಹಾಗೂ ಮಗ್ದಲೆನಾ ಸ್ವಿರ್ಸಿನ್ಸ್ಕಾಜೋಡಿಯನ್ನು ಮಣಿಸಿತು. 

ಪುರುಷರ ಡಬಲ್ಸ್‌ ವಿಭಾಗದ ಫೈನಲ್ಸ್‌ನಲ್ಲಿ ಕೃಷ್ಣ ಪ್ರಸಾದ್‌ ಗರಗ್‌ ಹಾಗೂ ಧ್ರುವ್‌ ಕಪಿಲಾ ಜೋಡಿಯು 21–19, 21–16ರಿಂದ ಜರ್ಮನಿಯ ಡೆನಿಯಲ್‌ ಹೆಸ್‌ ಹಾಗೂ ಜೊಹಾನ್ನಸ್‌ ಪಿಸ್ಟೊರಿಯಸ್‌ ಜೋಡಿಯ ಎದುರು ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು. 

ಅಗ್ರಶ್ರೇಯಾಂಕಿತ ಭಾರತದ ರೋಹನ್‌ ಕಪೂರ್‌ ಹಾಗೂ ಕುಹೂ ಗಾರ್ಗ್‌ ಜೋಡಿಯು ಮಿಶ್ರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಮುಗ್ಗರಿಸಿತು. 

ಮಹಿಳೆಯರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಸಿಮ್ರನ್‌ ಸಿಂಘಿ ಹಾಗೂ ರಿತಿಕಾ ಠಾಕರ್‌ ಜೋಡಿಯು ಸೆಮಿಫೈನಲ್‌ ಹೋರಾಟದಲ್ಲಿ ಮಣಿಯಿತು. ಎರಡನೇ ಶ್ರೇಯಾಂಕಿತ ರೋಹನ್‌ ಹಾಗೂ ಶಿವಂ ಶರ್ಮಾ ಜೋಡಿಯು ಪುರುಷರ ಡಬಲ್ಸ್‌ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಪರಾಭವಗೊಂಡಿತು. 

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !