ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಪ್ನಾ ಬರ್ಮನ್‌ಗೆ ವಿಶೇಷ ಶೂ

ಕಾಲುಗಳಲ್ಲಿ ತಲಾ ಆರು ಬೆರಳುಗಳಿದ್ದರಿಂದ ಸಾಧಾರಣ ಶೂ ಧರಿಸಲು ಕಷ್ಟವಾಗುತ್ತಿತ್ತು
Last Updated 8 ಮಾರ್ಚ್ 2019, 18:52 IST
ಅಕ್ಷರ ಗಾತ್ರ

ನವದೆಹಲಿ: ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಗಮನ ಸೆಳೆದಿದ್ದ ಭಾರತದ ಹೆಪ್ಟಾಥ್ಲಾನ್ ಕ್ರೀಡಾಪಟು ಸ್ವಪ್ನಾ ಬರ್ಮನ್‌ ಅವರಿಗೆ ಕೊನೆಗೂ ವಿಶೇಷ ಶೂಗಳು ಲಭಿಸಿದವು.

ಸ್ವಪ್ನಾ ಅವರ ಕಾಲುಗಳಲ್ಲಿ ತಲಾ ಆರು ಬೆರಳುಗಳಿದ್ದು ಸಾಧಾರಣ ಶೂ ಹಾಕಿ ಕ್ರೀಡಾ ಚಟುವಟಿಕೆ ನಡೆಸುವುದು ಕಷ್ಟವಾಗುತ್ತಿತ್ತು.

ಏಷ್ಯಾ ಕೂಟದಲ್ಲಿ ಪದಕ ಗೆದ್ದ ನಂತರ ಅವರು ಈ ವಿಷಯವನ್ನು ಬಹಿರಂಗ ಮಾಡಿದ್ದರು.

ಅವರ ನೋವಿಗೆ ಸ್ಪಂದಿಸಿದ ಜರ್ಮನ್‌ನ ಕ್ರೀಡಾ ಪೋಷಾಕು ತಯಾರಿಕಾ ಕಂಪನಿ ಅಡಿಡಾಸ್‌ ವಿಶೇಷವಾದ ಶೂ ತಯಾರಿಸಲು ಮುಂದಾಗಿತ್ತು.

ಕಂಪನಿಯವರು ತಮ್ಮ ಪ್ರಯೋ ಗಾಲಯಕ್ಕೆ ಸ್ವಪ್ನಾ ಅವರನ್ನು ಕರೆದುಕೊಂಡು ಹೋಗಿ ಅವರ ಪಾದದ ಅಳತೆ ತೆಗೆದುಕೊಂಡಿತ್ತು.

‘ಕೊನೆಗೂ ನನಗೆ ಫಿಟ್ ಆಗುವ ಒಂದು ಜೋಡಿ ಶೂ ಲಭಿಸಿದ್ದು ಸಂತಸದ ವಿಷಯ. ಮುಂದಿನ ದಿನಗಳಲ್ಲಿ ನನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಇದು ನೆರವಾಗಲಿದೆ. ಕಠಿಣ ಅಭ್ಯಾಸಕ್ಕೆ ಈ ಕೊಡುಗೆ ಪ್ರೇರಣೆ ನೀಡಿದೆ’ ಎಂದು ಸ್ವಪ್ನಾ ಬರ್ಮನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT