ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಪೇಸ್‌–ಮಿಗುಯೆಲ್‌ ಚಾಂಪಿಯನ್‌

Last Updated 14 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಲಿಯಾಂಡರ್‌ ಪೇಸ್‌ ಮತ್ತು ಮೆಕ್ಸಿಕೊದ ಮಿಗುಯೆಲ್‌ ಏಂಜಲ್‌ ರೆಯ್ಯೆಸ್‌ ವರೆಲಾ ಅವರು ಸ್ಯಾಂಟೊ ಡೊಮಿಂಗೊ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಭಾರತ–ಮೆಕ್ಸಿಕೊ ಜೋಡಿ 4–6, 6–3, 10–5ರಲ್ಲಿ ಏರಿಯಲ್‌ ಬೆಹರ್‌ ಮತ್ತು ರಾಬರ್ಟೊ ಕ್ವಿರೋಜ್‌ ಅವರನ್ನು ಸೋಲಿಸಿತು. ಈ ಹೋರಾಟ ಒಂದು ಗಂಟೆ 26 ನಿಮಿಷ ನಡೆಯಿತು.

45 ವರ್ಷ ವಯಸ್ಸಿನ ಪೇಸ್‌, ಈ ವರ್ಷ ಗೆದ್ದ ಎರಡನೇ ಚಾಲೆಂಜರ್‌ ಪ್ರಶಸ್ತಿ ಇದಾಗಿದೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 69ನೇ ಸ್ಥಾನದಲ್ಲಿರುವ ಭಾರತದ ಆಟಗಾರ ಈ ಜಯದೊಂದಿಗೆ 110 ರ‍್ಯಾಂಕಿಂಗ್‌ ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡಿದ್ದಾರೆ.

ಜನವರಿಯಲ್ಲಿ ನಡೆದಿದ್ದ ನ್ಯೂ ಪೋರ್ಟ್‌ ಬೀಚ್‌ ಟೂರ್ನಿಯಲ್ಲಿ ಪೇಸ್‌ ಚಾಂಪಿಯನ್‌ ಆಗಿದ್ದರು. ಹೋದ ವಾರ ನಡೆದಿದ್ದ ಮಾಂಟ್ರೆ ಚಾಲೆಂಜರ್‌ ಟೂರ್ನಿಯಲ್ಲಿ ಪೇಸ್‌ ಮತ್ತು ಮಿಗುಯೆಲ್‌ ರನ್ನರ್ಸ್‌ ಅಪ್‌ ಸಾಧನೆ ಮಾಡಿದ್ದರು.

ಪೇಸ್‌ ಮತ್ತು ಮಿಗುಯೆಲ್‌ ಮೊದಲ ಸೆಟ್‌ನಲ್ಲಿ ನಿರಾಸೆ ಕಂಡರು. ಎಂಟನೇ ಗೇಮ್‌ವರೆಗೆ ಛಲದಿಂದ ಹೋರಾಡಿದ ಇವರು ನಂತರ ಮಂಕಾದರು.

ಆದರೆ ಎರಡನೇ ಸೆಟ್‌ನಲ್ಲಿ ಭಾರತ–ಮೆಕ್ಸಿಕೊ ಜೋಡಿಯ ಆಟ ರಂಗೇರಿತು. ಆಕರ್ಷಕ ಡ್ರಾಪ್‌ ಮತ್ತು ಚೆಂಡನ್ನು ಹಿಂತಿರುಗಿಸುವಲ್ಲಿ ಚುರುಕುತನ ತೋರಿ ಸೆಟ್‌ ಜಯಿಸಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲೂ ಅಬ್ಬರಿಸಿದ ಪೇಸ್‌ ಮತ್ತು ಏಂಜಲ್‌ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT