ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಯಸ್ ಜೈನ್ ಗೆ ಚಿನ್ನ

Last Updated 28 ಅಕ್ಟೋಬರ್ 2019, 20:10 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಪಯಸ್ ಜೈನ್ ಅವರಿದ್ದ ಏಷ್ಯಾ ತಂಡವು ಪೊಲೆಂಡ್‌ನ ವ್ಲಾಡಿಸ್ಲವೊವೊದಲ್ಲಿ ನಡೆದ ಐಟಿಟಿಎಫ್ ವಿಶ್ವ ಕೆಡೆಟ್ ಚಾಲೆಂಜ್ ಟೇಬಲ್‌ ಟೆನಿಸ್ ಟೂರ್ನಿಯ ಪದಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿತು.

ಸೋಮವಾರ ನಡೆದ ಬಾಲಕರ ತಂಡ ವಿಭಾಗದಲ್ಲಿ ಪಯಸ್ ಅವರ ತಂಡವು 3–0ಯಿಂದ ಯುರೋಪ್ ತಂಡದ ವಿರುದ್ಧ ಗೆದ್ದಿತು. ತಂಡದಲ್ಲಿ ಪಯಸ್ ಅವರೊಂದಿಗೆ ದಕ್ಷಿಣ ಕೊರಿಯಾದ ಸಿಯೊಂಗಿಲ್ ಜಾಂಗ್ ಮತ್ತು ಜಪಾನಿನ ಸೋರಾ ಮಾತ್ಸುಸಿಮಾ ತಂಡದಲ್ಲಿದ್ದರು.

ಈ ಸುತ್ತಿನ ಮೊದಲ ಪಂದ್ಯದಲ್ಲಿ ಜಾಂಗ್ 3–1ರಿಂದ ಸಿಂಗಪುರದ ಯಾಂಗ್ ಇಜಾಕ್ ಕ್ವಿಕ್ ಎದುರು ಗೆದ್ದರು. ಸೋರಾ 3–1ರಿಂದ ರೊಮೆನಿಯಾದ ಲಲಿಯನ್ ಚಿರಿತಾ ವಿರುದ್ಧ ಜಯಿಸಿದರು. ಪಯಸ್ ಜೈನ್ 3–1 ರಿಂದ ಸ್ಪೇನ್‌ನ ಡೇನಿಯಲ್ ಬರ್ಜೋಸಾ ವಿರುದ್ಧ ಜಯ ಸಾಧಿಸಿದರು.

ಬಾಲಕಿಯರ ತಂಡ ವಿಭಾಗದಲ್ಲಿ ಭಾರತದ ಯಶಸ್ವಿನಿ ಘೋರ್ಪಡೆ ನಾಯಕತ್ವದ ತಂಡವು 3–0ಯಿಂದ ಪೊಲೆಂಡ್ ವಿರುದ್ಧ ಗೆದ್ದು ಕಂಚಿನ ಪದಕ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT